Glass Bottles | ಪ್ಲಾಸ್ಟಿಕ್ ಗಿಂತ ಗ್ಲಾಸ್ ಬಾಟಲಿ ಒಳ್ಳೆದು ಅನ್ನೋರು ಈ ಸುದ್ದಿ ಓದ್ಲೇ ಬೇಕು! ಭಯ ಹುಟ್ಟಿಸಿದೆ ಹೊಸ ಸಂಶೋಧನೆ

ಇತ್ತೀಚೆಗೆ ಪ್ಲಾಸ್ಟಿಕ್‌ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅರಿವಿನಿಂದ ಜನರು ಗ್ಲಾಸ್ ಬಾಟಲಿಗಳ ಕಡೆ ತಿರುಗುತ್ತಿದ್ದಾರೆ. ಪ್ಲಾಸ್ಟಿಕ್ ಬದಲಿಗೆ ಗಾಜಿನ ಬಾಟಲಿ ಆಯ್ಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿಯೆಂದು ಭಾವಿಸಲಾಗಿತ್ತು. ಆದರೆ ಇದೀಗ ಈ ನಂಬಿಕೆಗೆ ಉಲ್ಟಾ ಹೊಡೆದಿದೆ. ಫ್ರಾನ್ಸ್‌ನ ಆಹಾರ ಸುರಕ್ಷತಾ ಸಂಸ್ಥೆ ANSES ನಡೆಸಿದ ಅಧ್ಯಯನದ ವರದಿ ಗಾಜಿನ ಬಾಟಲಿ ಸುರಕ್ಷಿತ ಎಂಬ ಹಳೆಯ ನಂಬಿಕೆಗಳನ್ನೇ ಪ್ರಶ್ನಿಸುವಂತೆ ಮಾಡಿದೆ.

ಹೊಸ ಸಂಶೋಧನೆಯ ಪ್ರಕಾರ, ಗಾಜಿನ ಬಾಟಲಿಗಳು ಪ್ಲಾಸ್ಟಿಕ್‌ ಬಾಟಲಿಗಳಿಗಿಂತ 50 ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹೊಂದಿರುತ್ತವೆ. ಗ್ಲಾಸ್ ಬಾಟಲಿಗಳ ಪಾನೀಯಗಳ ಮಾದರಿಗಳನ್ನು ವಿಶ್ಲೇಷಿಸಿದಾಗ ಗ್ಲಾಸ್ ಬಾಟಲಿಗಳಲ್ಲಿ ಪ್ರತಿ ಲೀಟರಿಗೆ ಸರಾಸರಿ 100 ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾದವು. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮಾತ್ರ 1.6 ಕಣಗಳು ಕಂಡುಬಂದಿದ್ದವು. ಈ ಅಂಕಿ-ಅಂಶಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ.

ಈ ಪ್ಲಾಸ್ಟಿಕ್ ಕಣಗಳು ಎಲ್ಲಿ ಇರುತ್ತವೆ? ಅಧ್ಯಯನದ ಪ್ರಕಾರ, ಈ ಕಣಗಳ ಮೂಲ ಗ್ಲಾಸ್ ಬಾಟಲಿಯ ಮುಚ್ಚಳ ಎಂಬುದು ಸಂಶೋಧಕರ ಅಂದಾಜು. ಪಾನೀಯದಲ್ಲಿ ಕಂಡುಬಂದ ಪ್ಲಾಸ್ಟಿಕ್‌ ಕಣಗಳು ಬಾಟಲಿ ಮುಚ್ಚಳದ ಬಣ್ಣದೊಂದಿಗೆ ಹೊಂದಾಣಿಕೆಯಾಗಿದ್ದು, ಅವುಗಳಿಂದಲೇ ಬಂದಿರಬಹುದು ಎನ್ನಲಾಗಿದೆ.

ಪರಿಹಾರವೇನು?
ಗಾಜಿನ ಬಾಟಲಿಯ ಮುಚ್ಚಳಗಳನ್ನು ಎಥೆನಾಲ್-ನೀರಿನ ದ್ರಾವಣದಿಂದ ಸ್ವಚ್ಛಗೊಳಿಸಿದರೆ ಮೈಕ್ರೋಪ್ಲಾಸ್ಟಿಕ್‌ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬುದೇ ತಾತ್ಕಾಲಿಕ ಪರಿಹಾರ.

ಮೈಕ್ರೋಪ್ಲಾಸ್ಟಿಕ್ ಭಯ ಏಕೆ ಹೆಚ್ಚಾಗಿದೆ?
1950ರ ದಶಕದಲ್ಲಿ 1.5 ಮಿಲಿಯನ್ ಟನ್‌ ಇದ್ದ ಪ್ಲಾಸ್ಟಿಕ್ ಉತ್ಪಾದನೆ 2022ರ ವೇಳೆಗೆ 400.3 ಮಿಲಿಯನ್ ಟನ್ ಆಗಿದೆ. ಇದರ ಪರಿಣಾಮವಾಗಿ ಮೈಕ್ರೋಪ್ಲಾಸ್ಟಿಕ್‌ಗಳು ಸಾಗರ, ಮಣ್ಣು, ಮನುಷ್ಯರ ದೇಹ ಮತ್ತು ಮಿದುಳಲ್ಲಿಯೂ ಕೂಡ ಪತ್ತೆಯಾಗುತ್ತಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!