ಗುಜರಾತ್ ಟೈಟಾನ್ಸ್ ನಿಂದ ಹೊರಗುಳಿದ ಗ್ಲೆನ್ ಫಿಲಿಪ್ಸ್: ಮತ್ತೆ ತಂಡ ಸೇರಿದ ‘ಶನಕ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಟೈಟಾನ್ಸ್ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಆ ತಂಡದ ಪ್ರಮುಖ ಆಟಗಾರ ನ್ಯೂಜಿಲೆಂಡ್​ನ ಗ್ಲೆನ್ ಫಿಲಿಪ್ಸ್ ಇತ್ತೀಚೆಗೆ ಗಾಯಗೊಂಡಿದ್ದರು. ಇದರಿಂದಾಗಿ ಅವರು ಇಡೀ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ, ಗುಜರಾತ್ ಟೈಟಾನ್ಸ್ ತಂಡ ಅವರ ಸ್ಥಾನಕ್ಕೆ ಹೊಸ ಆಟಗಾರನ ಎಂಟ್ರಿ ಆಗಿದೆ. ಅದು ಯಾರು ಗೊತ್ತಾ? ಶ್ರೀಲಂಕಾ ತಂಡದ ಮಾಜಿ ನಾಯಕ ದಾಸುನ್ ಶನಕ.

ಈ ಹಿಂದೆ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಶನಕ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತವಾಗಿ ಘೋಷಿಸಿದೆ. ಗುಜರಾತ್ ಟೈಟನ್ಸ್ ಮೂಲಬೆಲೆ 75 ಲಕ್ಷಕ್ಕೆ ಖರೀದಿಸಿದೆ.

2025 ಮೆಗಾ ಹರಾಜಿನಲ್ಲಿ ಶನಕ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರಿರಲಿಲ್ಲ. ಇದರಿಂದಾಗಿ ಅವರು ಅನ್​ಸೋಲ್ಡ್​ ಆದರು. ಆದರೆ ಗ್ಲೆನ್ ಫಿಲಿಪ್ಸ್ ಗಾಯಗೊಂಡ ಕಾರಣ ಅವರಿಗೆ ಚಾನ್​ಸ್​ ಸಿಕ್ಕಿದೆ.

ಶನಕ ಶ್ರೀಲಂಕಾ ಪರ 6 ಟೆಸ್ಟ್, 71 ಏಕದಿನ ಮತ್ತು 102 ಟಿ20 ಪಂದ್ಯಗಳನ್ನು ಆಡಿದ್ದು, ಟೆಸ್ಟ್‌ನಲ್ಲಿ ಅರ್ಧಶತಕದೊಂದಿಗೆ 13 ವಿಕೆಟ್‌ಗಳನ್ನು ಮತ್ತು ಏಕದಿನದಲ್ಲಿ 2 ಶತಕ, 4 ಅರ್ಧಶತಕ ಮತ್ತು 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!