January16, 2026
Friday, January 16, 2026
spot_img

ಟೆನಿಸ್ ಅಖಾಡಕ್ಕೆ ಗ್ಲೋಬಲ್ ಸ್ಟಾರ್‌ಗಳ ಲಗ್ಗೆ: WTL ‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್’ಗೆ ಬೆಂಗಳೂರು ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಟೆನಿಸ್ ಲೀಗ್ (WTL) ‘ದಿ ಗ್ರೇಟೆಸ್ಟ್ ಶೋ ಆನ್ ಕೋರ್ಟ್’ ಡಿಸೆಂಬರ್ 17 ರಿಂದ 20 ರವರೆಗೆ ಬೆಂಗಳೂರು ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲು ಸಜ್ಜಾಗಿದೆ. ದೇಶದಾದ್ಯಂತ ಲೀಗ್‌ನ ಉತ್ಸಾಹ ಹೆಚ್ಚುತ್ತಿರುವ ಬೆನ್ನಲ್ಲೇ, ವರ್ಲ್ಡ್ ಟೆನಿಸ್ ಲೀಗ್ ತನ್ನ ತಂಡದ ಮಾಲೀಕರನ್ನು ಮತ್ತು ತಂಡಗಳ ಸಂಯೋಜನೆಯನ್ನು ಅನಾವರಣಗೊಳಿಸಿದೆ.

ಈ ಸೀಸನ್‌ನ ಫ್ರಾಂಚೈಸಿ ಮಾಲೀಕರಲ್ಲಿ ಹಾಲಿ ಚಾಂಪಿಯನ್‌ಗಳಾದ ಗೇಮ್ ಚೆಂಜರ್ಸ್ ಫಾಲ್ಕನ್ಸ್ (ಮಾಲೀಕ: ಅಮನ್ದೀಪ್ ಸಿಂಗ್, ಗೇಮ್ ಚೆಂಜರ್ಸ್ FZCO), ವಿಬಿರಿಯಾ ಅಲ್ಟಿ ಹಾಕ್ಸ್ (ಮಾಲೀಕ: ವಾಶು ಭಗ್ನಾನಿ), ಅಸ್ಸಿಮೆವರಿಕ್ಸ್ ಕೈಟ್ಸ್ (ಮಾಲೀಕರು: ಡಾ. ಉಮೇದ್ ಶೇಖಾವತ್, ಅಮಿತ್ ಸಾಹ್ನಿ ಮತ್ತು ಕೇವಲ್ ಕಲ್ರಾ) ಮತ್ತು AOS ಈಗಲ್ಸ್ (ಮಾಲೀಕರು: AOS ಸ್ಪೋರ್ಟ್ಸ್ ಟೂರ್ನಮೆಂಟ್, ದುಬೈ ಮತ್ತು ಸತೇಂದರ್ ಪಾಲ್ ಛಾಬ್ರಾ) ಸೇರಿದ್ದಾರೆ.

ವಿಶ್ವ ಟೆನಿಸ್ ಲೀಗ್‌ನ 2025 ಆವೃತ್ತಿಯು 16 ಆಟಗಾರರು, 4 ತಂಡಗಳು, 1 ಚಾಂಪಿಯನ್ ಹೊಂದಿದ್ದು, ಅನುಭವಿ ತರಬೇತುದಾರರ ನೇತೃತ್ವದಲ್ಲಿ ಕೆಲವು ಅತ್ಯುತ್ತಮ ಜಾಗತಿಕ ಟೆನಿಸ್ ತಾರೆಗಳು ಮತ್ತು ಭಾರತದ ಅಗ್ರ ಶ್ರೇಯಾಂಕಿತ ಆಟಗಾರರು ಈ ಆವೃತ್ತಿಯಲ್ಲಿ ಆಡಲಿದ್ದಾರೆ.

ಟೀಮ್ – ಕೋಚ್ – ಸ್ಕ್ವಾಡ್

ಗೇಮ್ ಚೆಂಜರ್ಸ್ ಫಾಲ್ಕನ್ಸ್
ಕೋಚ್: ಜಾನ್ ಲಾಫ್ನಿಡಿಜೆಗರ್ (JL)
ಸ್ಕ್ವಾಡ್: ಡಾನಿಯಲ್ ಮೆಡ್ವೆಡೆವ್, ರೋಹನ್ ಬೋಪಣ್ಣ, ಮಾಗ್ಡಾ ಲಿನೆಟ್, ಸಹಜಯ మలಪಲ್ಲಿ

ವಿಬಿರಿಯಾ ಅಲ್ಟಿ ಹಾಕ್ಸ್
ಕೋಚ್: ರಾಬರ್ಟ್ ಲಿಂಡ್ಸ್ಟೆಡ್
ಸ್ಕ್ವಾಡ್: ಡೆನಿಸ್ ಷಪೊವಾಲೊವ್, ಯುಕೀ ಭಾಂಬ್ರಿ, ಎಲೀನಾ ಸ್ವಿಟೋಲಿನಾ, ಮಾಯಾ ರೇವತಿ

ಅಸ್ಸಿಮೆವರಿಕ್ಸ್ ಕೈಟ್ಸ್
ಕೋಚ್: ಜೂಲಿಯನ್ ನೋವೆಲ್
ಸ್ಕ್ವಾಡ್: ನಿಕ್ ಕಿರ್ಗಿಯೋಸ್, ದಕ್ಷಿಣೇಶ್ ವರ್ಸುರೇಶ್, ಮಾರ್ಟಾ ಕೋಸ್ಟ್ಯುಕ್, ಅಂಕಿತಾ ರೈನಾ

AOS ಈಗಲ್ಸ್
ಕೋಚ್: ಮಾರ್ಕ್ ಗೆಲ್ಲಾರ್ಡ್
ಸ್ಕ್ವಾಡ್: ಗೇಲ್ ಮೋನ್ಫಿಲ್ಸ್, ಸುಮಿತ್ ನಾಗಲ್, ಪೌಲಾ ಬಡೋಸಾ, ಶ್ರೀವಲ್ಲಿ ಭಾಮಿಡಿಪತಿ

ಗೇಮ್ ಚೆಂಜರ್ಸ್ ಫಾಲ್ಕನ್ಸ್ ತಂಡದ ಮಾಲೀಕ ಅಮನ್ದೀಪ್ ಸಿಂಗ್ ಮಾತನಾಡಿ, “ನಾವು ಮತ್ತೊಂದು ಪ್ರಭಾವಶಾಲಿ ತಂಡದೊಂದಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮರಳಿದ್ದೇವೆ. ಮೆಡ್ವೆಡೆವ್ ಅವರ ಕೋರ್ಟು ಪ್ರಾಬಲ್ಯ ಮತ್ತು ಬೋಪಣ್ಣ ಅವರ ಡಬಲ್ಸ್ ಪರಿಣತಿಯಿಂದ ನಮ್ಮ ತಂಡವು ಶಕ್ತಿ ಮತ್ತು ಅನುಭವದ ಸಮತೋಲನವನ್ನು ತರುತ್ತದೆ” ಎಂದಿದ್ದಾರೆ.

ವಿಬಿರಿಯಾ ಅಲ್ಟಿ ಹಾಕ್ಸ್ ತಂಡದ ಮಾಲೀಕ ವಾಶು ಭಗ್ನಾನಿ ಮಾತನಾಡಿ, “ನಾವು ಉತ್ತಮ ಆಟಗಾರರನ್ನು ನಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಷಪೊವಾಲೊವ್ ಅವರ ಅಗ್ರೆಸಿವ್ ಆಟ, ಭಾಂಬ್ರಿ ಅವರ ನಿಷ್ಠೆ ಮತ್ತು ಮಾಯಾ ಅವರ ದೃಢತೆ ತಂಡಕ್ಕೆ ಮತ್ತಷ್ಟು ಬಲ ನೀಡಲಿದೆ. WTL ನಮ್ಮ ಮೊದಲ ಸೀಸನ್ ಅನ್ನು ಸ್ಮರಣೀಯವಾಗಿಸುತ್ತೇವೆ” ಎಂದಿದ್ದಾರೆ.

ಅಸ್ಸಿಮೆವರಿಕ್ಸ್ ಕೈಟ್ಸ್ ತಂಡದ ಮಾಲೀಕ ಡಾ. ಉಮೇದ್ ಶೇಖಾವತ್ ಮಾತನಾಡಿ, “ಕಿರ್ಗಿಯೋಸ್ ಅವರ ಸ್ಫೋಟಕ ಸರ್ವ್, ಕೋಸ್ಟ್ಯುಕ್ ಅವರ ಆಕ್ರಮಣಶೀಲತೆ, ದಕ್ಷಿಣೇಶ್ ಮತ್ತು ಅಂಕಿತಾ ಅವರ ಉತ್ತಮ ಪ್ರತಿನಿಧ್ಯದೊಂದಿಗೆ ನಮ್ಮ ತಂಡ ಭಾರತದಲ್ಲಿ ನಡೆಯುವ WTLನ ಮೊದಲ ಪಂದ್ಯಕ್ಕೆ ಸಿದ್ಧವಾಗಿದೆ” ಎಂದರು.

AOS ಈಗಲ್ಸ್ ತಂಡದ ಮಾಲೀಕ ಸತೇಂದರ್ ಪಾಲ್ ಛಾಬ್ರಾ ಮಾತನಾಡಿ, “ನಾಗಲ್ ಅವರ ಹಂಬಲ, ಪೌಲಾ ಮತ್ತು ಶ್ರೀವಲ್ಲಿ ಅವರ ಸಮತೋಲನ ಈ ತಂಡವನ್ನು ಲೀಗ್‌ನಲ್ಲಿ ಪ್ರಭಾವ ಬೀರುವ ತಂಡವನ್ನಾಗಿ ಮಾಡಲಿದೆ” ಎಂದರು.

ಬೆಂಗಳೂರು ವಿಶ್ವದಾದ್ಯಂತದ ಆಟಗಾರರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಂತೆ, WTLನ ಭಾರತದ ಮೊದಲ ಸೀಸನ್ ಉನ್ನತ ಮಟ್ಟದ ಪ್ರತಿಭೆ ಮತ್ತು ನಿಜವಾದ ಕ್ರೀಡಾಸ್ಫೂರ್ತಿಯ ಆಟಗಾರರನ್ನು ಹೊಂದಿದೆ.

Must Read

error: Content is protected !!