ಬದುಕಿನಲ್ಲಿ ನಾವು ಹಾಕಿಕೊಂಡ ಯೋಜನೆಗಳೆಲ್ಲವೂ ಕೈಗೂಡದಿದ್ದಾಗ ಮನಸ್ಸಿಗೆ ಬೇಸರವಾಗುವುದು ಸಹಜ. ಆದರೆ ನೆನಪಿಡಿ, ನಮ್ಮ ಇಷ್ಟದಂತೆ ನಡೆಯುವುದು ‘ಜೀವನ’ವಾದರೆ, ನಮ್ಮ ಪಾಲಿಗೆ ಯಾವುದು ಅತ್ಯುತ್ತಮವೋ ಅದನ್ನು ದೇವರು ನೀಡುವುದು ‘ವಿಧಿ’. ನಿಮ್ಮ ಪ್ಲಾನ್ ವರ್ಕ್ ಆಗುತ್ತಿಲ್ಲವೆಂದರೆ, ದೇವರು ನಿಮಗಾಗಿ ಅದಕ್ಕಿಂತ ದೊಡ್ಡದಾದ ಏನನ್ನೋ ಸಿದ್ಧಪಡಿಸುತ್ತಿದ್ದಾನೆ ಎಂದೇ ಅರ್ಥ.
ನಾವಂದುಕೊಂಡ ಹಾದಿಯಲ್ಲಿ ಮುಳ್ಳಿರಬಹುದು, ಅದಕ್ಕೇ ದೇವರು ನಮಗಾಗಿ ಹೂವಿನ ಹಾದಿಯನ್ನು ಹುಡುಕುತ್ತಿರಬಹುದು. ಪ್ರತಿಯೊಂದು ‘No’ ಹಿಂದೆ ಒಂದು ಅದ್ಭುತವಾದ ‘Next’ ಅಡಗಿರುತ್ತದೆ. ಸೋಲನ್ನು ಕಂಡು ಎದೆಗುಂದಬೇಡಿ, ಸೃಷ್ಟಿಕರ್ತನ ಸಂಕಲ್ಪದ ಮೇಲೆ ನಂಬಿಕೆಯಿರಲಿ.
ನೆನಪಿಡಿ.. ಸಣ್ಣ ಸೋಲುಗಳು ದೊಡ್ಡ ಗೆಲುವಿನ ಮುನ್ನುಡಿ ಮಾತ್ರ!



