ಜಲಪ್ರಳಯಕ್ಕೆ ಅಕ್ಷರಶಃ ನಲುಗಿದೆ ‘ದೇವರು ನಾಡು’: ರಣಭೀಕರ ಪ್ರವಾಹ ದೃಶ್ಯ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ಮಳೆಯಿಂದ ಉಂಟಾದ ಭೂಕುಸಿತ ದೇವರನಾಡನ್ನು ಧ್ವಂಸಗೊಳಿಸಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಲಯಂಗಡಿ ಸೇತುವೆ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳು ನಾಶವಾಗಿ 12 ಕುಟುಂಬಗಳು ಶೋಚನೀಯ ಪರಿಸ್ಥಿತಿಯಲ್ಲಿವೆ.

ವಿನಾಶಕಾರಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಗಾಗಿ ಕೇರಳ ಸರ್ಕಾರ ರಕ್ಷಣಾ ತಂಡಗಳ ಸಹಾಯವನ್ನು ಕೋರಿದೆ. ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು 122 ಇನ್ನೆಂಟ್ರಿ ಬೆಟಾಲಿಯನ್ (ಟಿಎ) ಮದ್ರಾಸ್ನ ಸೆಕೆಂಡ್-ಇನ್-ಕಮಾಂಡ್ ನೇತೃತ್ವದ 43 ಸಿಬ್ಬಂದಿಯ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ರಕ್ಷಣಾ ಪಿಆರ್ಒ ತಿಳಿಸಿದ್ದಾರೆ.

ವೈತಿರಿ ತಾಲೂಕಿನ ಮೆಪ್ಪಾಡಿ ಪಂಚಾಯತ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸಿಲುಕಿರುವ ಸುಮಾರು 250 ಜನರನ್ನು ರಕ್ಷಿಸಲು ಕೇರಳ ಸರ್ಕಾರದಿಂದ ಬಂದ ಮನವಿಯ ಮೇರೆಗೆ ಭಾರತೀಯ ಸೇನೆಯ ಎರಡು ರಕ್ಷಣಾ ತಂಡಗಳನ್ನು ರಕ್ಷಣಾ ಪಡೆಗಳ ಇಲಾಖೆಗೆ (ಡಿಎಸ್‌ಸಿ) ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!