ಹೊಸ ದಿಗಂತ ಡಿಜಿಟಲ್ ಡೆಸ್ಕ್:
55 ಮಂದಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಕ್ಕೆ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ಡಿಜಿಸಿಎ 10 ಲಕ್ಷ ರೂ. ದಂಡ ವಿಧಿಸಿದೆ.
ಜನವರಿ 9ರಂದು ಗೋ ಫಸ್ಟ್ ವಿಮಾನ 55 ಮಂದಿ ಪ್ರಯಾಣಿಕರನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಿಟ್ಟು ದೆಹಲಿಗೆ ಪ್ರಯಾಣಿಸಿತ್ತು.
ಈ ವಿಚಾರ ಪ್ರಯಾಣಿಕರು ಡಿಜಿಸಿಎಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಡಿಜಿಸಿಎ ಪರಿಶೀಲನೆ ನಡೆಸಿದಾಗ ಟರ್ಮಿನಲ್ ಸಂಯೋಜಕರು, ಸಿಬಂದಿ ನಡುವಿನ ಅಸಮರ್ಪಕ ಸಂವಹನದಿಂದಾಗಿ ಈ ಪ್ರಮಾದ ನಡೆದಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಗೋಫಸ್ಟ್‌ಗೆ ದಂಡ ವಿಧಿಸಿ ಡಿಜಿಸಿಎ ಆದೇಶಿಸಿದೆ.