ಫಸ್ಟ್ ಟೈಮ್ ಟ್ರಕ್ಕಿಂಗ್ ಹೋಗ್ತಿದ್ದೀರಾ? ಹೋಗೋಕೂ ಮುಂಚೆ ಈ ಐದು ವಿಷಯಗಳ ಬಗ್ಗೆ ಗಮನಕೊಡಿ.. ಯಾವೆಲ್ಲಾ ವಿಷಯಗಳು ನೋಡಿ..
ಕ್ಕಿಂಗ್ ಹೋಗಲು ನೀವು ದೈಹಿಕವಾಗಿ ಸದೃಢರಾಗಿರಬೇಕು. ನಿತ್ಯ ವ್ಯಾಯಾಮ ಮಾಡಬೇಕು. ನೀವು ಚಾರಣಕ್ಕೆ ತೆರಳುವ ಕೆಲವು ದಿನಗಳ ಮೊದಲು ವ್ಯಾಯಾಮ ಮಾಡಲು ಪ್ರಾರಂಭಿಸಿದರೆ ಉತ್ತಮ.
ನೀವು ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಟ್ರೆಕ್ಕಿಂಗ್‌ಗೆ ಸಿದ್ಧರಾಗಿರಬೇಕು. ನೀವು ಏರಲು ಸಾಧ್ಯವಾಗುತ್ತದೆಯೇ ಅಥವಾ ಯಾವುದೇ ಅಪಘಾತಗಳು ಸಂಭವಿಸುತ್ತಾ ಎಂಬ ಚಿಂತೆ ಒಳಗಾಗದಿರಿ. ನಾನು ಸುಲಭವಾಗಿ ಮಾಡಬಲ್ಲೆ ಎಂಬ ಸಕಾರಾತ್ಮಕ ಮನೋಭಾವದೊಂದಿಗೆ ಹೆಜ್ಜೆಇಡಿ.
ನೀವು ಧರಿಸುವ ಬಟ್ಟೆಯು ಹೋಗುವ ಪ್ರದೇಶಕ್ಕೆ ಸೂಕ್ತವಾಗಿರಬೇಕು. ಹವಾಮಾನವು ತಂಪಾಗಿದ್ದರೆ, ದೇಹಕ್ಕೆ ಉಷ್ಣತೆಯನ್ನು ನೀಡುವ ಉಣ್ಣೆ ಬಟ್ಟೆಗಳನ್ನು ಧರಿಸುವುದು ಉತ್ತಮ. ಬಿಸಿಲಿದ್ದರೆ ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.
ಚಾರಣ ಮಾಡುವಾಗ ದೇಹವು ಹೈಡ್ರೇಟ್ ಆಗಿರಬೇಕು. ಅದಕ್ಕಾಗಿಯೇ ನೀವು ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಆಹಾರವನ್ನು ಜೊತೆ ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಮರೆಯಬೇಡಿ.
ಸಮಯ ಮತ್ತು ಫಿಟ್‌ನೆಸ್ ಆಧರಿಸಿ ಚಾರಣ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಗಮ್ಯಸ್ಥಾನದ ಸಂಪೂರ್ಣ ವಿವರಗಳನ್ನು ಮುಂಚಿತವಾಗಿ ತಿಳಿದಿರಬೇಕು. ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರಾ ಎಂದು ತಿಳಿಯಲು ನಕ್ಷೆಗಳು, ದಿಕ್ಸೂಚಿ ಸೇರಿದಂತೆ ಇತರ ಸಾಧನಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.