ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಮತ್ತೊಮ್ಮೆ ಗಗನಕ್ಕೇರಿದ್ದು, ಬಂಡವಾಳ ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಕಾತುರ ಮೂಡಿಸಿದೆ. ಆಭರಣ ಖರೀದಿಗೆ ಉತ್ಸುಕರಾಗಿರುವ ಜನತೆಗೆ ದರ ಏರಿಕೆ ಶಾಕ್ ನೀಡಿದಂತಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ದರ 91,400 ರೂ ತಲುಪಿದ್ದು, 24 ಕ್ಯಾರೆಟ್ ಶುದ್ಧ ಚಿನ್ನದ ದರ 99,710 ರೂ ಆಗಿದೆ. ಬೆಳ್ಳಿಯ ದರವೂ ಸಹ 100 ಗ್ರಾಂಗೆ 11,500 ರೂ ತಲುಪಿದೆ. ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಇದೇ ದರ ನಿಗದಿಯಾಗಿದೆ.
ಚೆನ್ನೈನಲ್ಲಿ ಬೆಳ್ಳಿ ದರ 12,500 ರೂ; ರೆಕಾರ್ಡ್ ಮಟ್ಟದ ಏರಿಕೆ
ಬೆಳ್ಳಿಯ ಬೆಲೆಗಳು ಕೆಲವು ನಗರಗಳಲ್ಲಿ ಹೊಸ ದಾಖಲೆ ಬರೆದಿದ್ದು, ಚೆನ್ನೈ, ಕೇರಳ, ಭುವನೇಶ್ವರ್ನಲ್ಲಿ 100 ಗ್ರಾಂ ಬೆಳ್ಳಿ ದರ 12,500 ರೂ ತಲುಪಿದೆ. ಕೆಲವೇ ದಿನಗಳಲ್ಲಿ ಬೆಳ್ಳಿಯ ದರ ಪ್ರತಿ 100 ಗ್ರಾಂಗೆ 4 ರಿಂದ 5 ರೂ ಏರಿಕೆಯಾಗಿದೆ.
ವಿದೇಶದ ಚಿನ್ನದ ದರದಲ್ಲೂ ಏರಿಕೆ
ವಿದೇಶದ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮಲೇಷ್ಯಾದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 4,500 ರಿಂಗಿಟ್ (ಸುಮಾರು 90,820), ದುಬೈನಲ್ಲಿ 3,745 ದಿರಾಮ್ (87,510), ಅಮೆರಿಕದಲ್ಲಿ $1,045 (89,690) ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆದಾರರ ಭದ್ರತೆಗಾಗಿ ಚಿನ್ನದ ಮೇಲೆ ಧಾರಾಳ ಆಸಕ್ತಿ ಹೆಚ್ಚಾಗುತ್ತಿದೆ. ಅದರ ಜೊತೆಗೆ ದೇಶೀಯ ಬೇಡಿಕೆ, ರೂಪಾಯಿ ಬೆಲೆಯ ಕುಸಿತವೂ ಇತ್ತೀಚಿನ ದರ ಏರಿಕೆಗೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.