ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ 2022 ಅನ್ನು ಪ್ರಧಾನ ಮಾಡಿದರು.
ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಕಲ್ಯಾಣ್ ಸಿಂಗ್ (ಮರಣೋತ್ತರ ವಿಭಾಗದಲ್ಲಿ) ಅವರ ಪುತ್ರ ರಾಜ್ವೀರ್ ಸಿಂಗ್ ಅವರಿಗೆ ಪ್ರಶಸ್ತಿಯನ್ನ ಹಸ್ತಾಂತರಿಸಿದರು.
ನಟ ವಿಕ್ಟರ್ ಬ್ಯಾನರ್ಜಿ, ಒಡಿಯಾ ಲೇಖಕಿ ಡಾ.ಪ್ರತಿಭಾ ರೇ, ಖ್ಯಾತ ವಿದ್ವಾಂಸ ಆಚಾರ್ಯ ವಸಿಷ್ಠ ತ್ರಿಪಾಠಿ ಮತ್ತು ಕೋವ್ಯಾಕ್ಸಿನ್ ತಯಾರಿಸಿದ ಭಾರತ್ ಬಯೋಟೆಕ್ನ ಸ್ಥಾಪಕರಾದ ಡಾ.ಕೃಷ್ಣ ಎಲಾ ಮತ್ತು ಅವರ ಪತ್ನಿ ಸುಚಿತ್ರಾ ಎಲಾ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.