ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೃಷ್ಣ ಮಠದಲ್ಲಿ ಆಂಧ್ರಪ್ರದೇಶದ ಭಕ್ತೆಯೋರ್ವರ ಚಿನ್ನಾಭರಣಗಳು ಕಳವಾದ ಘಟನೆ ಶುಕ್ರವಾರ ನಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ನೆಲ್ಲೂರು ಜೆ.ಪದ್ಮಾವತಿ (60), ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ನ.24 ರಂದು ಉಡುಪಿಗೆ ಆಗಮಿಸಿ, ಖಾಸಗಿ ಹೋಟೆಲಿನಲ್ಲಿ ತಂಗಿದ್ದರು. ಸಂಜೆ 7 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರುಶನ ಪಡೆದಿದ್ದಾರೆ.
ಇದೇ ವೇಳೆ ಯಾರೋ ಕಳ್ಳರು ಪದ್ಮಾವತಿಯವರ ಹ್ಯಾಂಡ್ ಬ್ಯಾಗ್ ಒಳಗೆ, ಸಣ್ಣ ಪೌಚ್ ನಲ್ಲಿ ಇಟ್ಟಿದ್ದ 1 ಚಿನ್ನದ ಬಳೆ ಹಾಗೂ 1 ಲಕ್ಷ್ಮೀ ಲಾಕೆಟ್ ಅನ್ನು ಹೊಂದಿರುವ ಚಿನ್ನದ ಸರ ಮತ್ತು 2500 ರೂ.ಯನ್ನು ಕಳವು ಮಾಡಿದ್ದಾರೆ.
ಒಟ್ಟು 60 ಗ್ರಾಂ ತೂಕದ ಅಂದಾಜು ಮೌಲ್ಯ 3,80,000 ರೂ.ಯ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.