ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. 2026ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,25,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕಿನ ಎಕನಾಮಿಕ್ ರಿಸರ್ಚ್ ಗ್ರೂಪ್ ತಿಳಿಸಿದೆ.
2025ರ ಅಂತ್ಯದ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 99,500 ರೂ. ನಿಂದ 1,10,000 ರೂ. ವರೆಗೆ ವಹಿವಾಟು ನಡೆಸುತ್ತದೆ ಎಂದು ಗ್ರೂಪ್ ವಿಶ್ಲೇಷಿಸಿದೆ.
2025 ರಲ್ಲಿ ಜಾಗತಿಕ ಚಿನ್ನದ ಬೆಲೆಗಳು ಇಲ್ಲಿಯವರೆಗೆ ಶೇ.33 ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ 2025 ರ ಅಂತ್ಯಕ್ಕೆ ಒಂದು ಔನ್ಸ್‌ಗೆ (28.34 ಗ್ರಾಂ) ಸರಾಸರಿ 3,400-3,600 ಡಾಲರ್‌ಗೆ ತಲುಪಲಿದೆ. ಇದು, 2026 ರ ಮೊದಲಾರ್ಧದಲ್ಲಿ ಒಂದು ಔನ್ಸ್‌ಗೆ 3,600-3,800 ಡಾಲರ್‌ಗೆ ತಲುಪಬಹುದು ಎಂದು ವರದಿ ತಿಳಿಸಿದೆ.
ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ತೀವ್ರಗೊಂಡರೆ, ಈ ಶ್ರೇಣಿಗಳಲ್ಲಿ ಮತ್ತಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದೆ.