March 18, 2026
Wednesday, March 18, 2026
spot_img

Gold Rate | ಚಿನ್ನ–ಬೆಳ್ಳಿ ದರ ಮತ್ತೆ ಏರಿಕೆ: ಗ್ರಾಮ್​ಗೆ 285 ರೂ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಸುಮಾರು 285 ರೂ. ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವವೂ ಕಾಣಿಸಿಕೊಂಡಿದೆ.

ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,46,000 ರೂ. ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 1,59,280 ರೂ. ತಲುಪಿದೆ. ಪ್ರಸ್ತುತ 24 ಕ್ಯಾರಟ್ ಚಿನ್ನದ 1 ಗ್ರಾಂಗೆ 15,928 ರೂ., 22 ಕ್ಯಾರಟ್‌ಗೆ 14,600 ರೂ. ಮತ್ತು 18 ಕ್ಯಾರಟ್‌ಗೆ 11,946 ರೂ. ದರ ನಿಗದಿಯಾಗಿದೆ.

ಇದನ್ನೂ ಓದಿ:

ಬೆಳ್ಳಿ ದರದಲ್ಲೂ ಏರಿಕೆ ಕಂಡುಬಂದಿದ್ದು, ಕೆಲವು ನಗರಗಳಲ್ಲಿ ಪ್ರತಿ ಗ್ರಾಂಗೆ 5 ರಿಂದ 20 ರೂ.ವರೆಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ 1 ಗ್ರಾಂಗೆ 275 ರೂ. ಇದ್ದರೆ, ಚೆನ್ನೈನಲ್ಲಿ 290 ರೂ. ತಲುಪಿದೆ. ವಿದೇಶಗಳಲ್ಲೂ ದುಬೈ, ಅಮೆರಿಕ, ಸಿಂಗಾಪುರ ಸೇರಿದಂತೆ ಅನೇಕ ದೇಶಗಳಲ್ಲಿ ಚಿನ್ನದ ದರ ಏರಿಕೆಯಾಗಿದೆ.

ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಬೇಡಿಕೆ ಹೆಚ್ಚಳದಿಂದ ದರಗಳಲ್ಲಿ ಚಲನವಲನ ಮುಂದುವರಿಯಬಹುದು ಎನ್ನುವುದು ತಜ್ಞರ ಅಭಿಪ್ರಾಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !