April 10, 2026
Friday, April 10, 2026
spot_img

Gold Rate | ಚಿನ್ನ-ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ: ಇಂದಿನ ದರಪಟ್ಟಿ ಹೀಗಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ತಿಂಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. ನಿನ್ನೆ 210 ರೂ. ಏರಿಕೆಯಾಗಿದ್ದ 10 ಗ್ರಾಂ ಚಿನ್ನದ ದರ ಇಂದು 30 ರೂ. ಇಳಿದಿದೆ. ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ.

ಪ್ರಸ್ತುತ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 15,617 ರೂ., 22 ಕ್ಯಾರೆಟ್ ಚಿನ್ನದ ದರ 14,315 ರೂ. ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,43,150 ರೂ. ಇದ್ದು, 24 ಕ್ಯಾರೆಟ್ ಚಿನ್ನದ ದರ 1,56,170 ರೂ. ತಲುಪಿದೆ. ಬೆಳ್ಳಿ 1 ಗ್ರಾಂಗೆ 270 ರೂ., 100 ಗ್ರಾಂಗೆ 27,000 ರೂ. ಇದೆ.

ಇದನ್ನೂ ಓದಿ:

ಬೆಂಗಳೂರು ಸೇರಿದಂತೆ ಮುಂಬೈ, ಕೋಲ್ಕತಾ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ 14,315 ರೂ. ಇದ್ದರೆ, ದೆಹಲಿ ಮತ್ತು ಜೈಪುರದಲ್ಲಿ 14,330 ರೂ. ದಾಖಲಾಗಿದೆ. ಚೆನ್ನೈನಲ್ಲಿ 14,420 ರೂ. ಇದೆ.

ವಿದೇಶಗಳಲ್ಲಿ ದುಬೈ, ಅಮೆರಿಕ, ಸಿಂಗಾಪುರ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಚಿನ್ನದ ದರಗಳಲ್ಲಿ ಸಣ್ಣ ಏರಿಳಿತ ಕಂಡುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !