ಗೋಲ್ಡ್‌‌‌ ಸ್ಮಗ್ಲಿಂಗ್‌‌ ಪ್ರಕರಣ: DRI ಕಸ್ಟಡಿಗೆ ರನ್ಯಾ ರಾವ್‌‌ ಕೇಸ್ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಿಂದ ಗೋಲ್ಡ್‌‌‌ ಸ್ಮಗ್ಲಿಂಗ್‌‌ ಮಾಡಿದ ಆರೋಪ ಸಂಬಂಧ ನಟಿ ರನ್ಯಾ ರಾವ್‌‌ ಜಾಮೀನು ಅರ್ಜಿ ವಿಚಾರಣೆ ಇವತ್ತು ನಡೆಯಲಿದೆ.

ನಿನ್ನೆ ಕೋರ್ಟ್​ನಲ್ಲಿ ವಾದ ನಡೆಸಿದ ಡಿಆರ್​ಐ ಪರ ವಕೀಲರು ಹೊರ ದೇಶದಿಂದ ಚಿನ್ನ ಸಾಗಾಣಿಕೆ ನಡೆದಿದೆ. ಪ್ರೊಟೊಕಾಲ್ ಉಲ್ಲಂಘನೆ, ಹಾಗೂ ರಾಷ್ಟ್ರೀಯ ಭದ್ರತೆ ವಿಷಯವಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಅನೇಕರ ಕೈವಾಡವಿದೆ. ಹೆಚ್ಚಿನ ತನಿಖೆಗೆ DRI ಕಸ್ಟಡಿಗೆ ನೀಡಬೇಕು ಎಂದು ಹೇಳಿದ್ದರು.

ವಿಚಾರಣೆ ವೇಳೆ ರನ್ಯಾ ರಾವ್ ತಾವು ಯುರೋಪ್, ಅಮೆರಿಕ, ದುಬೈ ಮತ್ತು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದೇನೆ ಎಂದು ಡಿಆರ್​​​ಐಗೆ ಮಾಹಿತಿ ನೀಡಿದ್ದಾರೆ.

DRI ಅಧಿಕಾರಿಗಳು ರನ್ಯಾರಾವ್‌‌ ಕೊಟ್ಟಿರುವ ಮಾಹಿತಿಗಳನ್ನ ದಾಖಲಿಸಿ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಹಾಗೂ ಈ ದೋಷಾರೋಪಣೆ ಪಟ್ಟಿಯನ್ನು ಆಧರಿಸಿ, ಕಸ್ಟಡಿಗೆ ಕೊಡುವಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!