ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಇದೀಗ ಗೋಲ್ಡನ್ ಗರ್ಲ್ ಆಗಿದ್ದಾರೆ, ಯಾಕಂತೀರಾ? ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಕಾಲ ಬಂದಿದೆ.
ಬಾಲಿವುಡ್‌ನಲ್ಲಿ ವರ್ಷಗಳಿಂದ ನೆಲೆಯಾಗಿರೋ ಎಷ್ಟೋ ಮಂದಿಗೆ ಈಗಲೂ ಶಾರುಖ್ ಖಾನ್ ಜತೆ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆ ಇದ್ದದ್ದೆ. ಆದರೆ ಈಗಿನ್ನೂ ಬಾಲಿವುಡ್‌ಗೆ ಕಾಲಿಟ್ಟಿರುವ ರಶ್ಮಿಕಾಗೆ ಈ ಚಾನ್ಸ್ ಸಿಕ್ಕಿದೆ.
ಹೌದು, ಜಾಹೀರಾತೊಂದರಲ್ಲಿ ರಶ್ಮಿಕಾ ಹಾಗೂ ಶಾರುಖ್ ಖಾನ್ ಒಟ್ಟಾಗಿ ಕಾಣಿಸಲಿದ್ದಾರಂತೆ. ಯಶ್ ರಾಜ್ ಸ್ಟುಡಿಯೋದಲ್ಲಿ ಶೂಟಿಂಗ್ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಡ್ ಬಿಡುಗಡೆ ಆಗಲಿದೆ. ಇದು ಯಾವ ಜಾಹೀರಾತು ಎನ್ನುವ ಬಗ್ಗೆ ವಿಷಯ ಹೊರಬಿದ್ದಿಲ್ಲ.