Saturday, November 8, 2025

Health | ಸುವರ್ಣ ಗಡ್ಡೆ ಸಿಕ್ಕಾಪಟ್ಟೆ ಸ್ಪೆಷಲ್‌, ಇದನ್ನು ಓದಿದಮೇಲೆ ತಿಂದೇ ತಿಂತೀರ

ಸಾಮಾನ್ಯವಾಗಿ ಸುವರ್ಣಗಡ್ಡೆ ಎಲ್ಲರ ಅಡುಗೆ ಮನೆಯಲ್ಲಿ ಕಾಣೋದಿಲ್ಲ. ಇದು ನಾನ್‌ ವೆಜ್‌ ರೀತಿಯ ರುಚಿ ಕೊಡುತ್ತದೆ ಎಂದು ಹಲವರು ಜರಿಯುತ್ತಾರೆ. ಅವಕಾಶ ಸಿಕ್ಕಾಗೆಲ್ಲ ಸುವರ್ಣಗೆಡ್ಡೆಯನ್ನು ತಿನ್ನಿ. ಇದರಿಂದ ಏನೆಲ್ಲಾ ಲಾಭ ನೋಡಿ..


ಸುವರ್ಣ ಗಡ್ಡೆಯಲ್ಲಿರುವ ಅಲ್ಲನ್‌ಟೋನ್‌ ಎಂಬ ರಾಸಾಯನಿಕವು ಮಧುಮೇಹಿಗಳಿಗೆ ಅಗತ್ಯವಾದಂಥ ಪರಿಣಾಮವನ್ನು ನೀಡಬಲ್ಲದು ಎಂಬುದನ್ನು ವೈಜ್ಞಾನಿಕ ಪ್ರಯೋಗಗಳು ಹೇಳುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತ ಆಗದಂತೆ ನಿರ್ವಹಿಸುವ ಸಾಧ್ಯತೆ ಈ ರಾಸಾಯನಿಕಕ್ಕಿದೆ. ಇದರಲ್ಲಿ ನಾರಿನಂಶವೂ ಹೇರಳವಾಗಿದ್ದು, ಗ್ಲೈಸೆಮಿಕ್‌ ಸೂಚಿಯೂ ಕಡಿಮೆಯೇ ಇದೆ. ಹಾಗಾಗಿ ಸಕ್ಕರೆ ಕಾಯಿಲೆ ಇದ್ದವರಿಗೆ ಇದು ಸೇವಿಸಲು ಸೂಕ್ತವಾದಂಥ ಆಹಾರ.

ಇದರಲ್ಲಿರುವ ಎಲ್‌-ಆರ್ಜಿನೈನ್‌ ಎಂಬ ಸಂಯುಕ್ತವು ಕೆಲವು ರೀತಿಯ ಕ್ಯಾನ್ಸರ್‌ ಭೀತಿಯನ್ನು ದೂರ ಮಾಡುತ್ತದೆ. ಕ್ಯಾನ್ಸರ್‌ಗೆ ಪ್ರತಿಯಾಗಿ ದೇಹಕ್ಕೆ ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಅಂದರೆ, ಇದರಿಂದ ಕ್ಯಾನ್ಸರ್‌ ಗುಣವಾಗುತ್ತದೆ ಎಂದಲ್ಲ. ಆದರೆ ಚಿಕಿತ್ಸೆಯ ಸಂದರ್ಭದಲ್ಲಿ ದೇಹಕ್ಕೆ ಕೆಲವು ಅಗತ್ಯವಾದ ಅಂಶಗಳನ್ನು ಒದಗಿಸಬಲ್ಲದು.

ಇದರಲ್ಲಿರುವ ಫ್ಲೆವನಾಯ್ಡ್‌ ಅಂಶಗಳು ಬೊಜ್ಜು ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಇದರಲ್ಲಿರುವ ನಾರು ಮತ್ತು ಸಂಕೀರ್ಣ ಪಿಷ್ಟಗಳು ಸಹ ದೇಹದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುವಲ್ಲಿ ನೆರವಾಗುತ್ತವೆ. ಸೇವಿಸಿದ ನಂತರ ಬಹಳ ಹೊತ್ತಿನವರೆಗೆ ಹಸಿವಾಗದಂತೆ ತಡೆಯುವ ಸುವರ್ಣ ಗಡ್ಡೆಯು ತೂಕ ಇಳಿಸುವವರಿಗೂ ಅನುಕೂಲ ಒದಗಿಸುತ್ತದೆ.

ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯೂ ಸಮಸ್ಯೆಗಳನ್ನು ತಂದಿಡಬಲ್ಲದು. ಬಿ6 ಜೀವಸತ್ವದ ಕೊರತೆಯೂ ಇವುಗಳಲ್ಲಿ ಒಂದು. ಸುವರ್ಣ ಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್‌ ಬಿ6 ಕೊರತೆಯನ್ನು ಕಡಿಮೆ ಮಾಡಬಹುದು. ಆತಂಕ, ಒತ್ತಡ, ಕಿರಿಕಿರಿಯಂಥ ಮಾನಸಿನ ಸಮಸ್ಯೆಗಳು ಇದರಿಂದ ತಹಬಂದಿಗೆ ಬರುತ್ತವೆ

error: Content is protected !!