ಹೊಸ ವರ್ಷಕ್ಕೆ ಗೋಲ್ಡನ್‌ ಗಿಫ್ಟ್‌, ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

2025ರ ಹೊಸ ವರ್ಷ ಎಲ್ಲರ ಜೀವನದಲ್ಲೂ ಹರುಷ ತರಲಿ, ಬದುಕು ಬೆಳಗಿಸಲಿ. ನ್ಯೂ ಇಯರ್​​ದಂದೇ ಚಿನ್ನ, ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡುವವರಿಗೆ ಶುಭಸುದ್ದಿ.

ಈ ಮೌಲ್ಯಯುತ ವಸ್ತುಗಳಲ್ಲಿ ಬೆಲೆಗಳು ಏರಿಳಿತವಾಗುವುದು ಸಾಮಾನ್ಯ. ಯಾವಗಲೂ 10, 20 ರೂಪಾಯಿ ಇಳಿಕೆ ಕಾಣುತ್ತಿದ್ದ ಚಿನ್ನ, ಬೆಳ್ಳಿ ಹೊಸ ವರ್ಷದಂದು ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಖರೀದಿ ಮಾಡುವವರಿಗೆ ಇಂದು ಆರ್ಥಿಕ ಶುಭವಾಗುವುದು ಖಚಿತ.

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 7,225 ಇದೆ. ಇದು ನಿನ್ನೆ ₹ 7,265 ಇತ್ತು. ಈ ಎರಡು ದಿನದ ಬೆಲೆ ಹೋಲಿಕೆ ಮಾಡಿದರೆ ದರದಲ್ಲಿ 40 ರೂಪಾಯಿ ಇಳಿಕೆ ಆಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 72,250 ಇದೆ. ಇದು ನಿನ್ನೆ ₹ 72,650 ಇತ್ತು. ಇಲ್ಲಿಯೂ ಬೆಲೆಯಲ್ಲಿ ಬದಲಾವಣೆ ಆಗಿದ್ದು ನಿನ್ನೆಗಿಂತ ಇಂದು 400 ರೂಪಾಯಿ ಕಡಿಮೆ ಆಗಿದೆ.

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,586 ಆಗಿದೆ. ಇದು ನಿನ್ನೆ ₹ 7,628 ಇತ್ತು. 24 ಕ್ಯಾರೆಟ್​ ಬೆಲೆಯಲ್ಲೂ ವ್ಯತ್ಯಾಸ ಆಗಿದ್ದು 42 ರೂಪಾಯಿ ಇಳಿಕೆ ಕಂಡಿದೆ. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 75,860 ಇದೆ. ಇದು ನಿನ್ನೆ ₹ 76,280 ಇತ್ತು. ನಿನ್ನೆ ದರ, ಇವತ್ತಿನ ದರ ಈ ಎರಡರ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. 420 ರೂಪಾಯಿ ದರ ಕಡಿಮೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!