ಗೋಲ್ಡನ್‌ ಸ್ಟಾರ್‌ ಗಣೇಶ್ ಜನ್ಮ ದಿನ: ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್​ ಅನಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್‌ ನಟ ಗೋಲ್ಡನ್‌ ಸ್ಟಾರ್‌ ಗಣೇಶ್​ ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅವರ ಅಭಿಮಾನಿಗಳು ಖುಷಿಯಿಂದ ಸೆಲೆಬ್ರೇಟ್​ ಮಾಡುತ್ತಿದ್ದಾರೆ.

43ರ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರಿಗೆ ಎಲ್ಲೆಡೆ ಜನ್ಮದಿನದ ಶುಭಾಶಯ ಹರಿದುಬರುತ್ತಿದೆ. ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ವಿಶ್​ ಮಾಡುತ್ತಿದ್ದಾರೆ. ಅವರ ಹುಟ್ಟು ಹಬ್ಬದ ದಿನವೇ ಅವರ ಹೊಸ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

ಗಣೇಶ್​ ಅವರು ‘ಚೆಲ್ಲಾಟ’ ಸಿನಿಮಾದಿಂದ ಈವರೆಗೆ ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅನಾವರಣ ಆಗಿರುವ ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್​ನಲ್ಲಿ ಅವರ ಗೆಟಪ್​ ಸಖತ್​ ಭಿನ್ನವಾಗಿದೆ. ತುಂಬ ಸ್ಟೈಲಿಶ್​ ಆಗಿ ಅವರು ಡ್ರೆಸ್​ ಮಾಡಿಕೊಂಡಿದ್ದಾರೆ. ಹಿಂಬದಿಯಲ್ಲಿ ಐಷಾರಾಮಿ ಕಾರು ಇದೆ. ಆದರೆ ಅಲ್ಲೊಂದು ಟ್ವಿಸ್ಟ್​ ಕೂಡ ಇದೆ. ಭಾರಿ ಶ್ರೀಮಂತನಂತೆ ಕಾಣಿಸಿಕೊಂಡ ಗಣೇಶ್​ ಅವರು ಕೈಯಲ್ಲಿ ಪೊರಕೆ, ನೆಲ ಒರೆಸುವ ಸ್ಟಿಕ್​ ಹಾಗೂ ಬಕೆಟ್​ ಹಿಡಿದುಕೊಂಡಿದ್ದಾರೆ. ಹಣೆಗೆ ಟವೆಲ್​ ಕಟ್ಟಿಕೊಂಡಿದ್ದಾರೆ. ಈ ಪೋಸ್ಟರ್​ ನೋಡಿದ ಎಲ್ಲರಿಗೂ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡಿದೆ.

ಗಣೇಶ್​ ಅಭಿನಯದ 41ನೇ ಚಿತ್ರವಾಗಿ ‘ಕೃಷ್ಣಂ ಪ್ರಣಯ ಸಖಿ’ ಮೂಡಿಬರಲಿದೆ. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್​​ ಅವರಿಗೆ ಜೋಡಿಯಾಗಿ ಮಾಳವಿಕಾ ನಾಯರ್ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಶಿಕುಮಾರ್, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!