ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್‌ನ ಜನಪ್ರಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಮನವಿಯೊಂದನ್ನು ಅಭಿಮಾನಿಗಳಿಗೆ ಮಾಡಿದ್ದಾರೆ. ಜುಲೈ 2ರಂದು ತಮ್ಮ ಜನ್ಮದಿನವನ್ನು ಕುಟುಂಬದೊಂದಿಗೆ ಅಥವಾ ಅಭಿಮಾನಿಗಳ ಜೊತೆಗೆ ಆಚರಿಸೋಕಾಗಲ್ಲ. ಚಿತ್ರದ ಶೂಟಿಂಗ್ ಇರೋ ಕಾರಣ, ಅಭಿಮಾನಿಗಳಿಗೆ ತಮ್ಮ ಮನೆಯ ಬಳಿ ಬರದೇ ಇರುವಂತೆ ವಿನಂತಿಸಿದ್ದಾರೆ. ಈ ಸಂದೇಶವನ್ನು ಅವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
ಜುಲೈ 2 ನನ್ನ ಹುಟ್ಟುಹಬ್ಬ, ಆದರೆ ಈ ಸಲ ಭೇಟಿಯಾಗಲು ಆಗೋದಿಲ್ಲ
ಈ ಬಾರಿ ಹುಟ್ಟುಹಬ್ಬದಂದು ನಾನಿರೋದು ಶೂಟಿಂಗ್ ಸೆಟ್‌ನಲ್ಲಿ. ‘ಪಿನಾಕ’ ಮತ್ತು ‘ಯುರ್ಸ್ ಸಿಂಸಿಯರ್‌ಲಿ, ರಾಮ್’ ಚಿತ್ರಗಳ ಔಟ್‌ಡೋರ್ ಚಿತ್ರೀಕರಣವಿದೆ. ಹಾಗಾಗಿ ಈ ಸಲ ನಿಮ್ಮೆಲ್ಲರನ್ನು ಭೇಟಿಯಾಗಲು ಸಾಧ್ಯವಾಗಲ್ಲ, ಹೀಗಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಗಣೇಶ್ ತಮ್ಮ ಭಾವನಾತ್ಮಕ ನುಡಿಗಳ ಮೂಲಕ ಮನವಿ ಮಾಡಿದ್ದಾರೆ.
ಗಣೇಶ್, ತಮ್ಮ ಅಭಿಮಾನಿಗಳಿಗೆ ಮನೆಯಿಂದಲೇ ಆಶೀರ್ವಾದ ಕೋರಿ, “ನಿಮ್ಮೆಲ್ಲರ ಪ್ರೀತಿ, ಆಶೀರ್ವಾದವೇ ನನಗೆ ಸಿಕ್ಕ ಉತ್ತಮ ಉಡುಗೊರೆ. ಈ ಸಲ ನಾನು ನಿಮ್ಮನ್ನೆಲ್ಲಾ ನನ್ನ ಮನೆ ಬಳಿ ಭೇಟಿ ಮಾಡೋಕೆ ಅವಕಾಶ ನೀಡಲಾಗದಿದ್ದರೂ, ನೀವು ಎಲ್ಲಿ ಇರ್ತೀರೋ ಅಲ್ಲಿ ನಿಂತು ನನಗೆ ಶುಭ ಹಾರೈಕೆ ಮಾಡಿ” ಎಂದು ಕೋರಿದ್ದಾರೆ.