CINE | ಗೋಲ್ಡರ್‌ ಸ್ಟಾರ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ರಿಲೀಸ್‌, ಏನಂತಾರೆ ಫ್ಯಾನ್ಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸ್ಯಾಂಡಲ್​ವುಡ್​ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಇಂದು ಬಿಡುಗಡೆಯಾಗಿದೆ.  ಹಾಡುಗಳಿಂದಲೇ ಸೋಷಿಯಲ್​ ಮಿಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಲು ಅಭಿಮಾನಿಗಳು ಉತ್ಸುಕರಾಗಿ ಥಿಯೇಟರ್​​ನತ್ತ ಬರುತ್ತಿದ್ದಾರೆ.

ನಿನ್ನೆ ರಾತ್ರಿ ಪ್ರೀಮಿಯರ್ ಆಯೋಜಿಸಿದ್ದು, ಸ್ಯಾಂಡಲ್​ವುಡ್ ನಟ ಹಾಗೂ ನಟಿಯರು ಸಿನಿಮಾ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ನಟ ಗಣೇಶ್​ ಕೃಷ್ಣಂ ಪ್ರಣಯ ಸಖಿಗೆ ಬಿಗ್ ಓಪನಿಂಗ್ ಪಡೆಯೋ ಎಲ್ಲಾ ಸೂಚನೆ ಕೊಟ್ಟಿದೆ.

ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಡಿ ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ 8 ನಾಯಕಿಯರ ಜೊತೆಗೆ ಆ್ಯಕ್ಟ್ ಮಾಡಿದ್ದಾರೆ. ಇದು ಇಲ್ಲಿವರೆಗಿನ ಹೈಯೆಸ್ಟ್ ನಂಬರ್ ಅಂತಲೂ ಸ್ವತಃ ಗಣೇಶ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಫ್ಯಾಮಿಲಿ ಡ್ರಾಮಾ ಜೊತೆಗೆ ಒಂದಷ್ಟು ವಿಶೇಷ ಕಂಟೆಂಟ್ ಕೂಡ ಇದೆ.

ಸಿನಿಮಾ ನೋಡಿಬಂದ ಪ್ರೇಕ್ಷರು ಮಿಕ್ಸ್‌ ರಿಯಾಕ್ಷನ್‌ ನೀಡುತ್ತಿದ್ದು, ಕೆಲವರಿಗೆ ಸಿನಿಮಾ ಒಕೆ ಒಕೆ ಅನಿಸಿದೆ. ಇನ್ನು ಹಲವರಿಗೆ ಸಿನಿಮಾ ಇಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!