ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲು ಮುಂದಾಗಿದ್ದಾರೆ.
ಕರ್ನೂಲ್ ಜಿಲ್ಲೆಯ ನಂದ್ಯಾಲ್ ಚೆಕ್‌ಪೋಸ್ಟ್ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರು, ಚುನಾವಣೆಗೂ ಮೊದಲು ನೀಡಿದ ಎಲ್ಲ ಸೂಪರ್ ಸಿಕ್ಸ್ ಭರವಸೆಗಳನ್ನು ಶೀಘ್ರದಲ್ಲೇ ಈಡೇರಿಸುತ್ತೇವೆ. ಇದರಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಒದಗಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
19 ರಿಂದ 59 ವರ್ಷದ ಒಳಗಿನ ಮಹಿಳೆಯರಿಗೆ 1,500 ರೂಪಾಯಿ. ಮಹಿಳೆಯರಿಗೆ 20 ಲಕ್ಷ ಹೊಸ ಉದ್ಯೋಗಗಳು ಅಥವಾ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರೂಪಾಯಿ. ಉಚಿತ ಬಸ್ ಸೇವೆ ಇವುಗಳನ್ನು ಮೊದಲ ಹೆಜ್ಜೆಯಾಗಿ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಸಿಎಂ ಹೇಳಿದ್ದಾರೆ.
ಇದರ ಜೊತೆಗೆ ತಲ್ಲಿಕಿ ವಂದನಂ ಯೋಜನೆಯಡಿ ಶಾಲೆಗೆ ಹೋಗುವ ಮಗುವಿಗೆ ವರ್ಷಕ್ಕೆ 15,000 ರೂಪಾಯಿಗಳು. ದೀಪಂ-2 ಅಡಿ ವರ್ಷಕ್ಕೆ ಒಂದು ಮನೆಗೆ 3 ಗ್ಯಾಸ್ ಸಿಲಿಂಡರ್ಗಳು ಉಚಿತವಾಗಿ ಒದಗಿಸುವುದು ಮತ್ತು ಅನ್ನದಾತ ಸುಖಿಭವ ಯೋಜನೆ ಅಡಿ ಪ್ರತಿ ರೈತರಿಗೆ ವರ್ಷಕ್ಕೆ 20 ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಇದನ್ನು 3 ಕಂತುಗಳಲ್ಲಿ ಜಾರಿ ಮಾಡಲಾಗುವುದು. ಇವುಗಳನ್ನು ಶೀಘ್ರದಲ್ಲೇ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.