ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹೆಬ್ಬಾಳ ಫ್ಲೈಓವರ್ ಕಾಮಗಾರಿ ಆಗಸ್ಟ್ 15 ರ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಡಿಎ ಅಧ್ಯಕ್ಷ ಎನ್ಎ ಹ್ಯಾರೀಸ್ ಹೇಳಿದ್ದಾರೆ.
ಕಾಮಗಾರಿಗೆ ವೇಗ ನೀಡಲಾಗಿದೆ. ನಿಧಾನಗತಿ ಕಾಮಗಾರಿಯಿಂದ ಹೆಚ್ಚು ವೆಚ್ಚವಾಗಿಲ್ಲ ಎಂದು ಹೇಳಿದರು. ಬಿಡಿಎ 1600 ಸಿಎ ಸೈಟುಗಳ ಪ್ರಿನ್ಸಿಪಾಲ್ ಅಮೌಂಟ್ (ಅಸಲು ಮೊತ್ತ) ಬಾಕಿ ಇದೆ. ಪಾವತಿಗೆ 120 ದಿನಗಳ ಕಾಲಾವಕಾಶ ನೀಡಲಾಗಿದೆ. 120 ದಿನಗಳ ಒಳಗೆ ಅಸಲು ಕಟ್ಟಿದರೇ ಶೇ 18 ರಷ್ಟು ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಹೇಳಿದರು.
ಹೆಬ್ಬಾಳ ಫ್ಲೈಓವರ್ನ ಕೆ.ಆರ್.ಪುರ ಲೂಪ್ ನವೀಕರಿಸುವ ಕಾಮಗಾರಿಯನ್ನು 100 ದಿನದೊಳೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 2025ರ ಜನವರಿಯಲ್ಲಿ ಬಿಡಿಎಗೆ ಸೂಚನೆ ನೀಡಿದ್ದರು. ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಕಾಮಗಾರಿ ವೇಗದಿಂದ ಸಾಗುತ್ತಿದೆ.