ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯನ್ನು 24 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಗೃಹ ಬಳಕೆಗೆ ಬಳಸುವ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂದಿನಿಂದ 19 ಕೆಜಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ನ ಬೆಲೆ 24 ರೂ.ಗಳಷ್ಟು ಕಡಿತವಾಗಿದೆ. ಏಪ್ರಿಲ್ 8, 2025 ರಿಂದ ದೇಶೀಯ ಅನಿಲ ಸಿಲಿಂಡರ್ ಅಂದರೆ 14 ಕೆಜಿ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇಂಡಿಯನ್ ಆಯಿಲ್ ಹೊರಡಿಸಿದ ಹೊಸ ದರದ ಪ್ರಕಾರ, 19 ಕೆಜಿ ಎಲ್ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 1723.50 ರೂ.ಗೆ ಲಭ್ಯವಿರುತ್ತದೆ. ಮೊದಲು ಇದು 1747.50 ರೂ.ಗೆ ಲಭ್ಯವಿತ್ತು. ಇಂದು ಜೂನ್ 1 ರಿಂದ 24 ರೂಪಾಯಿಗಳಷ್ಟು ಅಗ್ಗವಾಗಿದೆ.