ಪುರುಷ ನೌಕರರಿಗೂ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಮಗುವಿನ ಆರೈಕೆಗೆ 6 ತಿಂಗಳ ರಜೆ ಸೌಲಭ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನು ಮುಂದೆ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಆರು ತಿಂಗಳು ಶಿಶುಪಾಲನಾ ರಜೆ(Childcare Leave) ಸೌಲಭ್ಯ ಸಿಗಲಿದೆ.

ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಮಗುವಿನ ಪಾಲನೆಗೆ ಗರಿಷ್ಠ 6 ತಿಂಗ ಕಾಲ ಶಿಶುಪಾಲನ ರಜೆ ಸೌಲಭ್ಯ ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರಿ ನೌಕರನೋರ್ವನ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳ ರಜೆಗೆ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ನೌಕರರೂ 180 ದಿನಗಳ ರಜೆಯನ್ನು ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರಿ ಪುರುಷ ನೌಕರರು ಶಿಶುಪಾಲನಾ ರಜೆ ಪಡೆಯಲು ಕೆಲ ಮಾನದಂಡಗಳಿವೆ. ಒಂಟಿ ಪೋಷಕರು, ವಿವಾಹಿತ-ವಿಚ್ಚೇದಿತ, ವಿಧುರ, ಅವಿವಾಹಿತ ಪುರುಷರ ರಾಜ್ಯ ಸರ್ಕಾರಿ ನೌಕರರು ತಮ್ಮ ಮಗುವಿನ ಪಾಲನೆಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ತಮ್ಮ ಸೇವಾವಧಿಯಲ್ಲಿ ಗರಿಷ್ಠ 180 ದಿನ ಮಾತ್ರ ಈ ಸೌಲಭ್ಯ ಬಳಸಿಕೊಳ್ಳಲು ಅವಕಾಶವಿದೆ. ಇಷ್ಟೇ ಅಲ್ಲ ಶಿಶುಪಾಲನ ರಜೆ ಪಡೆದ ಅವಧಿಯಲ್ಲಿ ಪುರುಷ ನೌಕರರು ವಿವಾಹವಾದರೆ ರಜೆ ರದ್ದಾಗಲಿದೆ.

ಮಕ್ಕಳ ಆರೈಕೆಗೆ ಪುರುಷ ನೌಕರರಿಗೆ ರಜೆ ಅವಶ್ಯಕತೆಯನ್ನು ಮನಗಂಡ ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ. ಶಿಶುಪಾಲನ ರಜೆ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ಈ ಸೌಲಭ್ಯವಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!