ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್.ವಿ.ರೋಡ್ನಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಯಾವಾಗ ರೈಲು ಸಂಚಾರ ಆರಂಭವಾಗುತ್ತದೆ ಎಂದು ಕಾದಿದ್ದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಸದ್ಯದಲ್ಲೇ ಹಳದಿ ಮಾರ್ಗದಲ್ಲೂ ಮೆಟ್ರೋ ರೈಲು ಸಂಚಾರ ಮಾಡಲಿದೆ. ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ನೀಡಿದೆ.
ಜುಲೈ 22 ರಿಂದ 25 ರವರೆಗೆ ಹಳದಿ ಮಾರ್ಗವನ್ನು ಪರಿಶೀಲನೆ ಮಾಡಿದ್ದ ಸೌತ್ ಜೋನ್ ರೈಲ್ವೆ ಸುರಕ್ಷತಾ ಆಯುಕ್ತ ಎಎಂ ಚೌಧರಿ ನೇತೃತ್ವದ ತಂಡ 19.15 ಕಿಮೀ ವಿಸ್ತೀರ್ಣವಿರುವ ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 16 ಮೆಟ್ರೋ ಸ್ಟೇಷನ್ಗಳನ್ನು ಹೊಂದಿರುವ ಮಾರ್ಗವಿದಾಗಿದ್ದು, 25 ನಿಮಿಷಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ.