ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯೆಲ್ಲೋ ಲೈನ್ ಮೆಟ್ರೋಗಾಗಿ ಕಾಯುತ್ತಿರುವವರಿಗಾಗಿ ಇದೀಗ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ಇದೇ ಜುಲೈಯೊಳಗೆ ಹಳದಿ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ತಿಳಿಸಿದೆ.

ಯಾವಾಗ ಯೆಲ್ಲೋ ಲೈನ್ ಮೆಟ್ರೋ ಓಪನ್ ಆಗುತ್ತೆ ಎನ್ನುತ್ತಿದ್ದವರಿಗೆ ಇದೀಗ ಬಿಗ್ ಅಪ್ಡೇಟ್ ನೀಡಿದ್ದು, ಕೊನೆಗೂ ಮಾರ್ಗ ಸಂಚಾರ ಮುಕ್ತ ಆಗುವ ಕುರಿತು ಮಾಹಿತಿ ನೀಡಿದೆ.

ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರ ಮುಕ್ತವಾಗಲಿದೆ ಎಂದು ಹೇಳಿದ್ದ ದಿನಾಂಕದಿಂದ ಮುಂದೂಡಿಕೆಯಾಗಿದ್ದು, ಜನ ರೋಸಿ ಹೋಗಿದ್ದರು. ಈ ಮಧ್ಯೆ ಆದಷ್ಟು ಬೇಗ ಮಾರ್ಗ ಓಪನ್ ಮಾಡಬೇಕು ಎಂದು ಬಿಎಂಆರ್‌ಸಿಎಲ್ ತೀವ್ರಗತಿಯಲ್ಲಿ ಕೆಲಸ ಆರಂಭಿಸಿದೆ.

ಈ ಮಾರ್ಗದಲ್ಲಿ ಡ್ರೈವರ್‌ ಲೈಸ್ ಮೆಟ್ರೋಗಳು ಓಡಾಡಲಿದ್ದು. ಟ್ರೈನ್‌ಗಳ ಬರುವಿಕೆ ತಡವಾಗಿದ್ದ ಕಾರಣದಿಂದಲೇ ಪ್ರಯಾಣ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಸದ್ಯ ತಮ್ಮ ಬಳಿ ಇರುವ ಎರಡು ರೈಲುಗಳಿಗೆ, ಶೀಘ್ರದಲ್ಲೇ ಇನ್ನೆರೆಡು ರೈಲು ಸೇರಿಸಿ ಮಾರ್ಗವನ್ನು ಸಂಚಾರ ಮುಕ್ತ ಮಾಡಲು ತಯಾರಿ ಶುರು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!