ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳ ಪಾಲನೆಗೆ ಇಲ್ಲಿದೆ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸೋ ಪೋಷಕರಿಗೆ ಕೆಲಸದ ಜೊತೆಯಲ್ಲೆ ಮಕ್ಕಳನ್ನು ನೋಡಿಕೊಳ್ಳಲು ಅವಕಾಶವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಲ್ಪಿಸಿದ್ದಾರೆ.

ಇದರಿಂದ ಕೆಲಸದ ಒತ್ತಡದಲ್ಲಿರುವ ಪೋಷಕರು ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬರುವ ಚಿಂತೆ ದೂರ ಮಾಡಿದ್ದಾರೆ.

ಇಲಾಖೆಯ ಡೇ ಕೇರ್ ನಲ್ಲಿ 30 ಮಕ್ಕಳ ಪಾಲನೆ ಮಾಡಲು ಸ್ಥಳಾವಕಾಶವಿದ್ದು 27 ಮಕ್ಕಳು ನೊಂದಣೆಯಾಗಿದ್ದಾರೆ. ಸುಸಜ್ಜಿತವಾದಂತ ವ್ಯವಸ್ಥೆಯಿದ್ದು ಒಂದು ವರ್ಷದ ಒಳಗಿನ ಮಕ್ಕಳಿಗೆ ಪಾಲನೆ ಮಾಡಲು ತೊಟ್ಟಿಲುಗಳ ವ್ಯವಸ್ಥೆ. ಐದು ವರ್ಷದ ಮಕ್ಕಳಿಗೆ ಆಟವಾಡು ಸುಸಜ್ಜಿತ ಸ್ಥಳದ ವ್ಯವಸ್ಥೆ ಗೋಡೆಗಳ ಮೇಲೆ ಮಕ್ಕಳಿಗೆ ಖುಷಿಪಡಿಸುವಂತಹ ವರ್ಣರಂಜಿತ ಕಾರ್ಟೂನ್ ಪೇಂಟಿಂಗ್ ಗಳಿವೆ.

ಮಕ್ಕಳಿಗೆ ಆಟದ ಜೊತೆ ಪಾಠ ಕಲಿಯಲು ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನೂ ಊಟ ಮಾಡಿದ ನಂತರ ಮಕ್ಕಳು ನಿದ್ರಾವಸ್ಥಗೆ ಜಾರಿದ್ರೆ ಮಕ್ಕಳು ಮಲಗಿಕೊಳ್ಳಲು ಬೆಡ್ ಗಳನ್ನ ಕೂಡ ಇಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರವರ ಕಾಳಜಿ ನಡೆಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!