April 4, 2026
Saturday, April 4, 2026
spot_img

ಆರ್‌ಸಿಬಿ ಫ್ಯಾನ್ಸ್ ಗೆ ಗುಡ್ ನ್ಯೂಸ್: ನಿಮಗಾಗಿ ನಾಳೆ ಓಡಾಡಲಿದೆ BMTC ವಿಶೇಷ ಬಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​ ನಡುವೆ ಬಿಗ್ ಮ್ಯಾಚ್ ನಡೆಯಲಿದ್ದು, ಈಗಾಗಲೇ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದು, ಇದರ ನಡುವೆ ಅಭಿಮಾನಿಗಳಿಗಾಗಿ ಮೆಟ್ರೋ ರೈಲುಗಳ ಸಮಯ ವಿಸ್ತರಣೆಯಾಗಿದ್ದು, ಇದೀಗ ಬಿಎಂಟಿಸಿ ಬಸ್​ಗಳ ವ್ಯವಸ್ಥೆ ಮಾಡಲಾಗಿದ್ದು, ಮೈದಾನದ ಕಡೆಯಿಂದ 8 ಬಸ್​​ಗಳು ಓಡಾಟ ನಡೆಸಲಿವೆ.

ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಾಡುಗೋಡಿ ಬಸ್ ನಿಲ್ದಾಣ,ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಟೌನ್​ಶಿಪ್, ಮಾಗಡಿ ರಸ್ತೆ, ಆರ್.ಕೆ.ಹೆಗಡೆ ನಗರ, ಯಲಹಂಕ, ಹೊಸಕೋಟೆ ಹಾಗೂ ಬನಶಂಕರಿ ಕಡೆ ಬಸ್ ಓಡಾಟ ನಡೆಸಲಿದೆ.

ಬಿಎಂಟಿಸಿ ಬಸ್​​ಗಳು ಸಿ.ಟಿ.ಒ ಜಂಕ್ಷನ್​​ನಿಂದ ಬಿ.ಆರ್.ವಿ ಜಂಕ್ಷನ್ ವರೆಗೆ ರಸ್ತೆಯ ಎಡ ಭಾಗದಲ್ಲಿ ನಿಲುಗಡೆಯಾಗಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !