September 30, 2026
Wednesday, September 30, 2026
spot_img

FOOD | ಲೈಟ್ ಡಿನ್ನರ್ ಮಾಡೋರಿಗೆ ಈ ಮಶ್ರೂಮ್ ಸೂಪ್ ಬೆಸ್ಟ್: ಒಮ್ಮೆ ಟ್ರೈ ಮಾಡಿ

ರಾತ್ರಿ ಸಮಯದಲ್ಲಿ ಹೆಚ್ಚು ಹೆವಿ ಊಟ ತಿನ್ನೋಕೆ ಮನಸ್ಸಿಲ್ಲ ಅಂದ್ರೆ, ಲೈಟ್ ಡಿನ್ನರ್‌ಗೆ ಮಶ್ರೂಮ್ ಸೂಪ್ ಬೆಸ್ಟ್. ಹೊಟ್ಟೆ ತುಂಬಿದ ಅನುಭವ ಕೊಡೋದರ ಜೊತೆಗೆ, ದೇಹಕ್ಕೂ ತುಂಬಾ ಲೈಟ್ ಆಗಿರುತ್ತದೆ. ವಿಶೇಷವಾಗಿ ವೆಯಿಟ್ ಲಾಸ್ ಮಾಡ್ತಿರುವವರು ಅಥವಾ ರಾತ್ರಿ ಹೆಲ್ತಿ ಆಗಿ ಏನಾದರೂ ತಿನ್ನಬೇಕು ಅನ್ನೋವರಿಗೆ ಈ ಸೂಪ್ ಸೂಪರ್ ಆಯ್ಕೆ.

ಬೇಕಾಗುವ ಪದಾರ್ಥಗಳು

ಮಶ್ರೂಮ್ – 200 ಗ್ರಾಂ
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ – 4 ಎಸಳು
ಬೆಣ್ಣೆ ಅಥವಾ ಆಲಿವ್ ಆಯಿಲ್ – 1 ಟೇಬಲ್ ಸ್ಪೂನ್
ಹಾಲು – 1/2 ಕಪ್ (ಐಚ್ಛಿಕ)
ನೀರು ಅಥವಾ ವೆಜ್ ಸ್ಟಾಕ್ – 2 ಕಪ್
ಕಾಳುಮೆಣಸು ಪುಡಿ – 1/2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಪ್ಯಾನ್‌ನಲ್ಲಿ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಮಶ್ರೂಮ್ ಹಾಕಿ 4-5 ನಿಮಿಷ ಚೆನ್ನಾಗಿ ಸಾಟೇ ಮಾಡಿ.

ಮಶ್ರೂಮ್ ಸಾಫ್ಟ್ ಆದ ಬಳಿಕ ಅದಕ್ಕೆ 2 ಕಪ್ ನೀರು ಅಥವಾ ವೆಜ್ ಸ್ಟಾಕ್ ಹಾಕಿ 8-10 ನಿಮಿಷ ಕುದಿಯಲು ಬಿಡಿ. ಬಳಿಕ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಸ್ಮೂತ್ ಆಗಿ ಗ್ರೈಂಡ್ ಮಾಡಿ.

ಮತ್ತೆ ಅದನ್ನು ಪ್ಯಾನ್‌ಗೆ ಹಾಕಿ, ಬೇಕಾದರೆ ಸ್ವಲ್ಪ ಹಾಲು ಸೇರಿಸಿ. ಉಪ್ಪು ಮತ್ತು ಮೆಣಸು ಪುಡಿ ಹಾಕಿ 2 ನಿಮಿಷ ಕುದಿಸಿ.

ಬಿಸಿ ಬಿಸಿ ಮಶ್ರೂಮ್ ಸೂಪ್ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

Must Read