‘ಮೋದಿ 3.0’ ಸರ್ಕಾರದಿಂದ ದೇಶದ ಜನತೆಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ದರ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ ಮೊದಲ ದಿನ ದೇಶದ ಜನರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮೊದಲ ಬಾರಿಗೆ LPG ದರಗಳನ್ನು ಕಡಿಮೆ ಮಾಡಲಾಗಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಈಗ 31 ರೂ.ಗೆ ಇಳಿಕೆ ಮಾಡಲಾಗಿದೆ. ಗೃಹಬಳಕೆ ಸಿಲಿಂಡ‌ರ್ ದರದಲ್ಲಿ ಬದಲಾವಣೆ ಇಲ್ಲ. ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1724 ರೂ. ದೆಹಲಿಯಲ್ಲಿ 1745 ರೂ. ಮತ್ತು ಮುಂಬೈನಲ್ಲಿ 1698 ರೂ. ಇವೆ.

ಕಳೆದ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 72 ರೂ. ಕಡಿತಗೊಳಿಸಲಾಗಿತ್ತು ಈಗ 31 ರೂ. ತೈಲ ಕಂಪನಿಗಳು ತಮ್ಮ ಸುಂಕವನ್ನು ಪರಿಷ್ಕರಿಸಿದ್ದು, ಪರಿಷ್ಕೃತ ಸುಂಕಗಳು ಇಂದಿನಿಂದ ಜಾರಿಗೆ ಬರಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!