March 12, 2026
Thursday, March 12, 2026
spot_img

ಪ್ರವಾಸಿಗರಿಗೆ ಗುಡ್ ನ್ಯೂಸ್: ಕಾಶ್ಮೀರದ 14 ಪ್ರವಾಸಿ ತಾಣಗಳು ಮತ್ತೆ ಓಪನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಬಂದ್ ಆಗಿದ್ದ ಕೇಂದ್ರಾಡಳಿತ ಪ್ರದೇಶದ 14 ಪ್ರವಾಸಿ ತಾಣಗಳನ್ನು ಇಂದು ಪುನಃ ತೆರೆದಿದೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಆದೇಶಿಸಿದ್ದು, ಸಂಪೂರ್ಣ ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿನ ಬಹುತೇಕ ಪ್ರವಾಸಿ ತಾಣಗಳನ್ನು ಪುನಃ ತೆರೆಯಲಾಗಿದೆ.

ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.

ಈ ಹಿಂದೆ ಸೆಪ್ಟೆಂಬರ್ 26 ರಂದು, ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು 12 ಪ್ರವಾಸಿ ತಾಣಗಳನ್ನು ಪುನಃ ತೆರೆಯಲು ಆದೇಶಿಸಿದ್ದರು.

ಕಾಶ್ಮೀರ ವಿಭಾಗದ ಹನ್ನೊಂದು ಪ್ರವಾಸಿ ತಾಣಗಳಾದ – ಯೂಸ್ಮಾರ್ಗ್, ದೂಧ್‌ಪತ್ರಿ, ಕೊಕರ್‌ನಾಗ್‌ನ ದಂಡಿಪೋರಾ ಪಾರ್ಕ್, ಶೋಪಿಯಾನ್‌ನ ಪೀರ್ ಕಿ ಗಲಿ, ದುಬ್ಜನ್ ಮತ್ತು ಪದ್‌ಪವಾನ್, ಅಸ್ತಾನ್‌ಪೋರಾ, ಶ್ರೀನಗರದ ಟುಲಿಪ್ ಗಾರ್ಡನ್, ತಜ್ವಾಸ್ ಗ್ಲೇಸಿಯರ್, ಗಂಡರ್‌ಬಾಲ್‌ನ ಹಂಗ್ ಪಾರ್ಕ್ ಮತ್ತು ಬಾರಾಮುಲ್ಲಾದ ವುಲ್ಲಾರ್ ಮತ್ತು ವಾಟ್ಲಾಬ್ ಗಳನ್ನು ತಕ್ಷಣವೇ ಪುನಃ ತೆರೆಯಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !