May 5, 2026
Tuesday, May 5, 2026
spot_img

ಬಿಹಾರ ರಾಜಕೀಯದಲ್ಲಿ ಬಿಗ್ ಅಪ್ಡೇಟ್: ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ನಿತೀಶ್ ಕುಮಾರ್ ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆ ರಾಜ್ಯದ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ಬಿಹಾರದಲ್ಲಿ ಶೀಘ್ರದಲ್ಲೇ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಹಾರ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಹಾಗೂ ಸಾಮ್ರಾಟ್ ಚೌಧರಿ ಭಾಗವಹಿಸಿದ್ದು, ಆಡಳಿತ ಬದಲಾವಣೆಯ ಸೂಚನೆಗಳು ಮತ್ತಷ್ಟು ಸ್ಪಷ್ಟವಾಗಿವೆ.

ಇದನ್ನೂ ಓದಿ:

ರಾಜ್ಯಸಭೆ ಹುದ್ದೆ ಸ್ವೀಕರಿಸುವ ಮುನ್ನವೇ ನಿತೀಶ್ ಕುಮಾರ್ ದೆಹಲಿಗೆ ತೆರಳಿ, ಮುಖ್ಯಮಂತ್ರಿ ಹುದ್ದೆಯಿಂದ ಶೀಘ್ರದಲ್ಲೇ ಕೆಳಗಿಳಿಯುವ ಕುರಿತು ಸುಳಿವು ನೀಡಿದ್ದರು. ಬಿಹಾರದಲ್ಲಿ ತಾವು ಬಹುತೇಕ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇನ್ನು ಮುಂದೆ ರಾಷ್ಟ್ರೀಯ ರಾಜಕೀಯ ಜವಾಬ್ದಾರಿಗಳತ್ತ ಗಮನ ಹರಿಸುವುದಾಗಿ ಅವರು ಹೇಳಿದ್ದರು.

ಎನ್‌ಡಿಎ ನಾಯಕತ್ವದ ಸಭೆಯ ಬಳಿಕ ಹೊಸ ಮುಖ್ಯಮಂತ್ರಿ ಹೆಸರಿನ ಬಗ್ಗೆ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !