February 2, 2026
Monday, February 2, 2026
spot_img

ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಟ್ರೈನ್ ಬರೋದು ಲೇಟ್ ಆದ್ರೆ ಫ್ರೀ ಊಟ, ಹಣ ಕೂಡ ವಾಪಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಹಾಗೂ ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ವಿಳಂಬವಾದರೆ ವಿಶೇಷ ಸೌಲಭ್ಯಗಳಿವೆ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ ಆರು ಗಂಟೆಗಳಷ್ಟು ತಡವಾಗಿ ಸಂಚರಿಸಿದಾಗ ಪ್ರಯಾಣಿಕರಿಗೆ ಉಚಿತ ಊಟ ನೀಡಿದ ಘಟನೆ ಈ ನಿಯಮ ಮತ್ತೆ ಚರ್ಚೆಗೆ ಬಂದಿದೆ.

ಐಆರ್‌ಸಿಟಿಸಿ ಆಹಾರ ಪೂರೈಕೆ ನೀತಿಯಂತೆ, ಟಿಕೆಟ್ ದರದಲ್ಲೇ ಊಟದ ಶುಲ್ಕ ಸೇರಿರುವ ರೈಲುಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆ ಅಥವಾ ಹೆಚ್ಚು ತಡವಾದರೆ ಪ್ರಯಾಣಿಕರಿಗೆ ಉಚಿತ ಆಹಾರ ನೀಡಬೇಕು. ವಿಳಂಬದ ಸಮಯವನ್ನು ಅವಲಂಬಿಸಿ ಉಪಾಹಾರ ಅಥವಾ ಊಟ ಒದಗಿಸಲಾಗುತ್ತದೆ. ಬೆಳಗ್ಗೆ ಅಥವಾ ಸಂಜೆ ತಡವಾದರೆ ಚಹಾ, ಕಾಫಿ ಹಾಗೂ ಬಿಸ್ಕತ್ತು, ಬೆಳಗಿನ ಉಪಾಹಾರವಾಗಿ ಬ್ರೆಡ್, ಬೆಣ್ಣೆ ಮತ್ತು ಜ್ಯೂಸ್ ಸಿಗುತ್ತದೆ. ಮಧ್ಯಾಹ್ನ ಅಥವಾ ರಾತ್ರಿ ವಿಳಂಬವಾದರೆ ತರಕಾರಿ ಊಟ ನೀಡಲಾಗುತ್ತದೆ.

ಇದನ್ನೂ ಓದಿ:

ಒಂದು ವೇಳೆ ರೈಲು ಮೂರು ಗಂಟೆಗೂ ಹೆಚ್ಚು ವಿಳಂಬವಾದರೆ ಅಥವಾ ಮಾರ್ಗ ಬದಲಾದರೆ, ಪ್ರಯಾಣಿಕರು ಟಿಕೆಟ್ ರದ್ದುಪಡಿಸಿ ಸಂಪೂರ್ಣ ಹಣವನ್ನು ಪಡೆಯುವ ಹಕ್ಕು ಹೊಂದಿದ್ದಾರೆ. ಈ ಸಂದರ್ಭದಲ್ಲಿ ನಿಲ್ದಾಣಗಳ ವೇಟಿಂಗ್ ರೂಮ್‌ಗಳನ್ನು ಉಚಿತವಾಗಿ ಬಳಸಬಹುದು. ರೈಲ್ವೆಯ ಈ ವ್ಯವಸ್ಥೆ ವಿಶೇಷವಾಗಿ ಚಳಿಗಾಲದಲ್ಲಿ ಪ್ರಯಾಣಿಕರಿಗೆ ದೊಡ್ಡ ಸಹಾಯವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !