ಟ್ರಕ್ ಚಾಲಕರಿಗೆ ಗುಡ್ ನ್ಯೂಸ್: ದೇಶದಲ್ಲಿ ಇನ್ನು ಕ್ಯಾಬಿನ್‌ಗೆ ಎಸಿ ಅಳವಡಿಕೆ ಕಡ್ಡಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ಅಕ್ಟೋಬರ್ 1ರ ಬಳಿಕ ನಿರ್ಮಾಣವಾಗುವ ಎಲ್ಲಾ ಹೊಸ ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಎಸಿ ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಈ ಸಂಬಂಧ ಪ್ರತಿಕ್ರಿಸಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ, ಚಾಲಕರು 47% ರಷ್ಟು ಕಠಿಣ ತಾಪಮಾನದಲ್ಲಿ ವಾಹನ ಚಲಾಯಿಸುತ್ತಾರೆ. ಭಾರತದ ಟ್ರಕ್‌ಗಳು ಚಾಲಕನ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಂಡಿಲ್ಲ.

ಅಮೆರಿಕದಂತಹಾ ದೇಶಗಳಲ್ಲಿ ಸುರಕ್ಷತೆ, ಆರಾಮ ವೈಶಿಷ್ಟ್ಯಗಳು ಟ್ರಕ್ ತಯಾರಕರಿಗೆ ಆದ್ಯತೆಯ ಪಟ್ಟಿಯಲ್ಲಿರುತ್ತವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!