ಗುಡ್‌ನ್ಯೂಸ್‌.. ಇನ್ಮುಂದೆ ದೇವಸ್ಥಾನದ ರೂಮ್ಸ್‌ ಖಾಲಿ ಇದ್ಯಾ ಇಲ್ವಾ ಆನ್‌ಲೈನ್‌ನಲ್ಲೇ ಚೆಕ್‌ ಮಾಡ್ಬೋದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇವಾಲಯಗಳ ರೂಮ್‌ನಲ್ಲಿ ಸ್ಟೇ ಮಾಡಲು ಇಚ್ಛಿಸಿದ್ದವರಿಗೆ ಮುಜರಾಯಿ ಇಲಾಖೆ ಕಡೆಯಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ರಾಜ್ಯ ಹಾಗೂ ಬೇರೆ ರಾಜ್ಯಗಳ ದೇಗುಲದ ರೂಮ್‌ಗಳ ಮಾಹಿತಿ ವೈಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ವೀಕೆಂಡ್ಸ್‌, ಹಬ್ಬದ ಸಂದರ್ಭದಲ್ಲಿ ದೇವಸ್ಥಾನಗಳ ಜೊತೆಗೆ ಅಲ್ಲಿನ ರೂಮ್‌ಗಳು ಕೂಡ ತುಂಬಾ ರಷ್ ಇರುತ್ತವೆ. ಈ ಸಮಯದಲ್ಲಿ ಉಳಿದುಕೊಳ್ಳಲು ಭಕ್ತಾದಿಗಳು ಪರದಾಡುತ್ತಾರೆ ಜೊತೆಗೆ ದುಪ್ಪಟ್ಟು ಹಣ ಕೊಟ್ಟು ರೂಮ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆಲ್ಲಾ ಬ್ರೇಕ್ ಹಾಕುವ ನಿಟ್ಟಿನಲ್ಲಿ, ರಾಜ್ಯ ಹಾಗೂ ಹೊರರಾಜ್ಯದ ದೇಗುಲಕ್ಕೆ ಹೋಗುವ ಭಕ್ತಾದಿಗಳಿಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ ನೀಡಿದೆ

ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ವಿವಿಧ ಕ್ಷೇತ್ರಗಳಿಗೆ ಹಣ ಮಂಜೂರು ಮಾಡಿದ್ದಾರೆ. ಅದರಂತೆ ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗಲು ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡಲು ಧಾರ್ಮಿಕ ಧತ್ತಿ ಇಲಾಖೆ ಮುಂದಾಗಿದೆ. ಈ ಕೋಶದಂತೆ ವೆಬ್‌ಸೈಟ್‌ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!