ಒಳ್ಳೆಯ ನಿದ್ರೆ ಎಂದರೆ ಶರೀರಕ್ಕೂ ಮನಸ್ಸಿಗೂ ಪುನರ್ಜನ್ಮದಂತೆ. ಆದರೆ ಇಂದಿನ ಒತ್ತಡದ ಜೀವನದಲ್ಲಿ ಅನೇಕರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರೆಗೆ ಸಹಾಯಕವಾದ ಕೆಲ ಸಹಜ ಪಾನೀಯಗಳು ಇದ್ದರೆ ಹೇಗಿರುತ್ತದೆ? ಹೌದು! ಕೆಲವು ಪಾನೀಯಗಳು ನಮ್ಮ ನಿದ್ರೆ ಹಾರ್ಮೋನ್‌ಗಳಾದ ಮೆಲಟೊನಿನ್ ಮತ್ತು ಟ್ರಿಪ್ಟೋಫಾನ್‌ಗಳನ್ನು ಉತ್ತೇಜಿಸಿ ನಿದ್ರೆಯನ್ನು ಸುಲಭಗೊಳಿಸುತ್ತವೆ. ಬನ್ನಿ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವ ಐದು ಉತ್ತಮ ಪಾನೀಯಗಳನ್ನು ತಿಳಿದುಕೊಳ್ಳೋಣ.
- ಬಿಸಿ ಹಾಲು: ಬಿಸಿ ಹಾಲಿನಲ್ಲಿ ಇರುವ ಟ್ರಿಪ್ಟೋಫಾನ್ ಮತ್ತು ಮೆಲಟೊನಿನ್ ನಿದ್ರೆ ಹಾರ್ಮೋನ್‌ಗಳನ್ನು ಚುರುಕುಗೊಳಿಸುತ್ತವೆ. ಹಾಲು ಕುಡಿದರೆ ದೇಹದ ತಾಪಮಾನ ನಿಯಂತ್ರಣವಾಗುತ್ತದೆ ಮತ್ತು ಮನಸ್ಸು ಶಾಂತಗೊಳ್ಳುತ್ತದೆ.
- ಟಾರ್ಟ್ ಚೆರಿ ಜ್ಯೂಸ್: ಟಾರ್ಟ್ ಚೆರಿಗಳು ಸಹಜ ಮೆಲಟೊನಿನ್‌ನ ಮೂಲವಾಗಿವೆ. ರಾತ್ರಿ ಒಂದು ಸಣ್ಣ ಗ್ಲಾಸ್ ಕುಡಿದರೆ ನಿದ್ರೆ ಸಮಯ ಹೆಚ್ಚಾಗಿ, ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ.
- ಕ್ಯಾಮೊಮೈಲ್ ಟೀ: ಈ ಹೂವಿನ ಚಹಾದಲ್ಲಿ “ಅಪಿಜೆನಿನ್” ಎಂಬ ಸಂಯುಕ್ತವು ನರವ್ಯೂಹವನ್ನು ಶಾಂತಗೊಳಿಸಿ ಒತ್ತಡ ಕಡಿಮೆ ಮಾಡುತ್ತದೆ. ಇದು ಕ್ಯಾಫೀನ್‌ರಹಿತವಾದ ಅತ್ಯುತ್ತಮ ನಿದ್ರೆ ಪಾನೀಯ.
- ಬಾಳೆಹಣ್ಣು ಸ್ಮೂದಿ: ಬಾಳೆಹಣ್ಣುಗಳಲ್ಲಿ ಮ್ಯಾಗ್ನೀಷಿಯಂ ಮತ್ತು ಪೊಟ್ಯಾಸಿಯಂ ಅಧಿಕವಾಗಿ ಇರುತ್ತದೆ. ಇವು ಸ್ನಾಯುಗಳನ್ನು ಸಡಿಲಗೊಳಿಸಿ ರಾತ್ರಿ ಕಾಲಿನ ಕ್ರ್ಯಾಂಪ್‌ಗಳನ್ನು ತಡೆಯುತ್ತವೆ. ಬಾಳೆಹಣ್ಣನ್ನು ಬಿಸಿ ಹಾಲು ಅಥವಾ ಬಾದಾಮಿ ಹಾಲಿನೊಂದಿಗೆ ಕುಡಿಯಿರಿ.
- ಬಾದಾಮಿ ಹಾಲು: ಬಾದಾಮಿ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ ಇರುತ್ತದೆ. ಇವು ದೇಹದ ವಿಶ್ರಾಂತಿ ಚಕ್ರವನ್ನು ಸಮತೋಲನಗೊಳಿಸಿ ಶಾಂತ ನಿದ್ರೆಗೆ ಸಹಕಾರಿಯಾಗುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

