ಭಾರತೀಯ ಆಹಾರ ಪದ್ಧತಿಯಲ್ಲಿ ಅಕ್ಕಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಅನ್ನವನ್ನು ‘ಅನ್ನ ಬ್ರಹ್ಮ’ ಎಂದು ಕರೆದಿದ್ದಾರೆ. ದಶಕಗಳ ಕಾಲ ನಮ್ಮ ಮನೆಗಳಲ್ಲಿ ಅಕ್ಕಿ ದಿನನಿತ್ಯದ ಪ್ರಮುಖ ಆಹಾರವಾಗಿಯೇ ಉಳಿದಿದೆ. ಆದರೆ ವೈದ್ಯರ ಪ್ರಕಾರ, ಈಗಿನ ಜೀವನಶೈಲಿ ಮತ್ತು ಆರೋಗ್ಯ ಪರಿಸ್ಥಿತಿಯಲ್ಲಿ ಮೂರು ಹೊತ್ತು ಅನ್ನವನ್ನೇ ಸೇವಿಸುವುದು ದೇಹಕ್ಕೆ ಒಳ್ಳೆಯದಲ್ಲ, ಬದಲಾಗಿ ಅನೇಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚು ಇರುವುದರಿಂದ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಏರಿಸುತ್ತದೆ. ಇದರಿಂದ ಮಧುಮೇಹ ರೋಗಿಗಳಿಗೆ ತೊಂದರೆ ಹೆಚ್ಚಾಗುತ್ತದೆ. ಆದ್ದರಿಂದ ವೈದ್ಯರು ಮಧುಮೇಹಿಗಳಿಗೂ, ಪ್ರಿ ಡಯಾಬಿಟಿಕ್ ಅಪಾಯದಲ್ಲಿರುವವರಿಗೂ ಅನ್ನದ ಸೇವನೆಯನ್ನು ನಿಯಂತ್ರಣ ಮಾಡಲು ಸಲಹೆ ನೀಡಿದ್ದಾರೆ.
ಅನ್ನದಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುವುದರಿಂದ ಪ್ರತಿದಿನ ಹೆಚ್ಚು ಸೇವನೆ ಮಾಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ದೈಹಿಕ ಚಟುವಟಿಕೆ ಕಡಿಮೆಯಿರುವವರಲ್ಲಿ ತೂಕ ಹೆಚ್ಚಳ ಮಾತ್ರವಲ್ಲ, ಮಹಿಳೆಯರಲ್ಲಿ ಥೈರಾಯ್ಡ್ ಹಾಗೂ ಪಿಸಿಒಡಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬಿಳಿ ಅಕ್ಕಿಯಲ್ಲಿ ಪೋಷಕಾಂಶ ಕಡಿಮೆ, ಕಾರ್ಬೋಹೈಡ್ರೇಟ್ ಹೆಚ್ಚು ಇರುವುದರಿಂದ ಹೃದಯದ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಟ್ರೈಗ್ಲಿಸರೈಡ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಮೂಲಕ ಹೃದಯಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬಿಳಿ ಅಕ್ಕಿಯ ಬದಲು ಕಂದು ಅಕ್ಕಿ ಅಥವಾ ಇತರೆ ಪರ್ಯಾಯಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ಮೂರು ಹೊತ್ತು ಅನ್ನ ಮಾತ್ರ ತಿನ್ನುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಹೆಚ್ಚುತ್ತದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವುದರಿಂದ ತೂಕ ಹೆಚ್ಚಳ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ.
ಅನ್ನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಏರಿಕೆಯಾಗುತ್ತದೆ ಎಂಬ ಮಾತುಗಳಿವೆ. ಇದನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ದೃಢಪಡಿಸದಿದ್ದರೂ, ದೇಹದಲ್ಲಿ ಬದಲಾವಣೆಗಳನ್ನು ಉಂಟುಮಾಡುವ ಸಾಮರ್ಥ್ಯ ಅನ್ನಕ್ಕಿದೆ ಎಂದು ತಜ್ಞರು ಸೂಚಿಸಿದ್ದಾರೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)