ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೀಗಾಗಿಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ರಾಜಾಪುರ ಬ್ಯಾರೇಜ್‌ನಿಂದ ಕರ್ನಾಟಕಕ್ಕೆ ಮತ್ತೆ ನೀರು ಬಿಡುಗಡೆ ಮಾಡಲಾಗಿದೆ.
ರಾಜಾಪುರ ಬ್ಯಾರೇಜ್‌ನಿಂದ 4200 ಕ್ಯೂಸೆಕ್ ನೀರನ್ನು ಸೋಮವಾರ ಕೃಷ್ಣಾ ನದಿಗೆ ರಿಲೀಸ್ ಮಾಡಲಾಗಿದೆ. ಸದ್ಯ ಅಥಣಿ ತಾಲೂಕಿನ ದರೂರ ಸೇತುವೆವರೆಗೂ ನೀರು ತಲುಪಿದೆ.
ಮೊನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರ ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನಿನ್ನೆಯಷ್ಟೇ ಕುಡಚಿ-ಉಗಾರ ಸೇತುವೆವರೆಗೆ ನೀರು ತಲುಪಿದೆ. ಸದ್ಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಹಿನ್ನೆಲೆ 4200 ಕ್ಯೂಸೆಕ್ ನೀರು ರಿಲೀಸ್ ಮಾಡಿದ್ದು, ಈ ಭಾಗದ ಜನರು ಹರ್ಷಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಬಳಿಯಿರುವ ರಾಂಪುರ ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಇಷ್ಟು ದಿನ ನೀರಿಲ್ಲದೇ ಕೃಷ್ಣಾ ನದಿ ಬರಡು ಭೂಮಿಯಂತಾಗಿತ್ತು. ನದಿಯಲ್ಲಿ ನೀರಿಲ್ಲದೆ ಜಾನುವಾರು, ಕೃಷಿಗೆ ಸಮಸ್ಯೆಯಾಗಿತ್ತು. ಇದೇ ವೇಳೆ ನೀರು ಹರಿದು ಬರುತ್ತಿರುವುದರಿಂದ ಜನರು ಸಂತಸಗೊಂಡಿದ್ದಾರೆ.