ನಿರೂಪಣೆಗೆ ಗುಡ್‌ಬೈ ಹೇಳಿದ ಬಿಗ್‌ಬಾಸ್ ಹೋಸ್ಟ್, ಇದೀಗ ನಿರೂಪಣೆ ಮಾಡೋದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಕ್ಷಕರ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಶೋ ಬಿಗ್‌ಬಾಸ್. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂನಲ್ಲಿ ಶೋ ಪ್ರಸಾರವಾಗುತ್ತಿದ್ದು, ಇದನ್ನು ನಡೆಸುವ ಹೋಸ್ಟ್‌ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ತಮಿಳಿನಲ್ಲಿ ಕಮಲ್ ಹಾಸನ್ ಬಿಗ್‌ಬಾಸ್ ನಿರೂಪಣೆ ಮಾಡುತ್ತಿದ್ದು, ಇದೀಗ ನಿರೂಪಕನ ಹುದ್ದೆಗೆ ಗುಡ್‌ಬೈ ಹೇಳುತ್ತಿದ್ದಾರೆ.
ನಟನೆ,ನಿರ್ಮಾಣ, ರಾಜಕೀಯ, ನಿರ್ದೇಶನ ಎಲ್ಲದರಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಮಲ್ ಹಾಸನ್‌ಗೆ ಇದಕ್ಕೆ ಟೈಮ್ ಹೊಂದಿಸುವುದು ಕಷ್ಟವಾಗಿದೆ ಎನ್ನುವಂತೆ ಕಾಣುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ಕಮಲ್ ಹಾಸನ್ ನೀಡಿಲ್ಲ.
ಕಮಲ್ ಹಾಸನ್ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಜೊತೆಗೆ ಇದೀಗ ಯಾರು ಶೋ ಹೋಸ್ಟ್ ಮಾಡಬಹುದು ಎನ್ನುವ ಕುತೂಹಲವೂ ಕಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!