ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಡುವಿನ ಜಗಳ ಜನರಿಗೆ ಹೊಸದೇನಲ್ಲ.
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದ ವೇಳೆ ವರದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ಸವಾಲು ಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರದೀಪ್ ಅವರು ಸುಧಾಕರ್ ಅವರನ್ನು ಸೋಲಿಸುತ್ತಾರಂತೆ.
ಸಂಸತ್ತಿನ ಮೆಟ್ಟಿಲುಗಳನ್ನ ಹತ್ತಲು ಕೂಡ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಸುಧಾಕರ್ ಒಂದು ಮತದಿಂದ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ ಎಂದಿದ್ದಾರೆ ಪ್ರದೀಪ್.
ಸುಧಾಕರ್ ಸೋತರೆ ತನ್ನೆಲ್ಲ ವ್ಯಾಪಾರ ವ್ಯವಹಾರಗಳನ್ನು ಬಿಡಬೇಕು. ಸವಾಲು ಸ್ವೀಕರಿಸಿದರೆ ಇಬ್ಬರು ಹೋಗಿ ನಂದಿಕೇಶ್ವರ ದೇವಸ್ಥಾನಲ್ಲಿ ಪ್ರಮಾಣ ಮಾಡೋಣ. ಅವರಲ್ಲಿ ತಾಕತ್ತು ಇದ್ದರೆ ನನ್ನ ಸವಾಲು ಸ್ವೀಕರಿಸಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.