ಮೇಷ
ಎಲ್ಲರೂ ನಿಮ್ಮನ್ನು ಮೆಚ್ಚಿಕೊಳ್ಳಬೇಕು ಎಂಬ ಭಾವನೆ ಬಿಡಿ. ಅದು ಅಸಾಧ್ಯ. ಭಾವುಕ ಸನ್ನಿವೇಶ ಎದುರಿಸುವಿರಿ. ದೃಢಮನಸ್ಸು ಅಗತ್ಯ.
ವೃಷಭ
ಗಮನವಿಟ್ಟು ಕಾರ್ಯ ಎಸಗಿ. ತಪ್ಪು ಆಗುವ ಸಾಧ್ಯತೆಗಳಿವೆ. ಪ್ರೀತಿಪಾತ್ರರ ಕಾಳಜಿ ನೋಡಿಕೊಳ್ಳಿ. ಅನಿರೀಕ್ಷಿತ ಖರ್ಚು ಒದಗುವುದು.
ಮಿಥುನ
ಅರ್ಧಕ್ಕೆ ನಿಲ್ಲಿಸಿದ ಕಾರ್ಯ ಸಂಪೂರ್ಣ ಆಗಲಿದೆ. ಕೌಟುಂಬಿಕ ಸಹಕಾರ. ವೃತ್ತಿಗೆ ಸಂಬಂಧಿಸಿ ವಿವೇಕದ ನಿರ್ಧಾರ ತೆಗೆದುಕೊಳ್ಳಿ.
ಕಟಕ
ಖಾಸಗಿ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಲು ಸಕಾಲ. ನಿಮ್ಮ ಅಭಿಪ್ರಾಯ ಸೂಚಿಸಲು ಹಿಂಜರಿಕೆ ಬೇಡ. ಆರ್ಥಿಕ ಒತ್ತಡ ಹೆಚ್ಚಲಿದೆ.
ಸಿಂಹ
ಹೆಚ್ಚು ಪ್ರಯಾಣದ ಸಾಧ್ಯತೆ. ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ. ಆಪ್ತರಿಂದ ವಿಶೇಷ ಸುದ್ದಿ ಕೇಳಿಸೀತು. ಮಕ್ಕಳು ಹರಿತ ವಸ್ತುವಿನಲ್ಲಿ ಆಡಬಾರದು.
ಕನ್ಯಾ
ನಿಮ್ಮ ಕಾರ್ಯ ಸಾಽಸಲು ಹೆಚ್ಚಿನ ಪ್ರಯತ್ನ ಬೇಕು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕೆಲಸದ ಹೊರೆ. ಬಯಸಿದ ವಿರಾಮ ಸಿಗಲಾರದು.
ತುಲಾ
ಹಿನ್ನಡೆಗೆ ಅಂಜದಿರಿ. ನಗು ಲೇಪಿಸಿಕೊಂಡು ಕಾರ್ಯವೆಸಗಿ. ನೀವೂ ಸಂತೋಷಪಡಿ, ಇತರರನ್ನೂ ಸಂತೋಷ ಗೊಳಿಸಿ. ವೆಚ್ಚ ನಿಯಂತ್ರಣ.
ವೃಶ್ಚಿಕ
ಸಮಸ್ಯೆ ಮರೆತು ನೆಮ್ಮದಿಯಿಂದ ಕಳೆಯಲು ಬಯಸುವಿರಿ. ಆದರೆ ಕೆಲಸದ ಒತ್ತಡ ಬೆನ್ನು ಬಿಡದು. ಬಂಧುಗಳ ಸಹಕಾರದಿಂದ ಸಾಂತ್ವನ.
ಧನು
ಇತರರ ಒಳಿತಿನ ಕುರಿತು ಕಾಳಜಿ ತೋರುವಿರಿ. ನಿಮ್ಮ ಕುರಿತಾದ ತಪ್ಪು ಕಲ್ಪನೆ ನಿವಾರಣೆ. ಬಂಧು ಭೇಟಿಯ ಖುಷಿ.
ಮಕರ
ಆತ್ಮವಿಶ್ವಾಸ ಹೆಚ್ಚುವ ಬೆಳವಣಿಗೆ. ಹೆಚ್ಚುವರಿ ಹೊಣೆ ಹೊತ್ತುಕೊಂಡು ಬಳಲಬೇಡಿ. ಹಿಡಿದ ಕೆಲಸದಲ್ಲಿ ಉತ್ತಮ ಪ್ರಗತಿ ಉಂಟಾಗಲಿದೆ.
ಕುಂಭ
ಫಲಪ್ರದ ದಿನ. ಯೋಜಿತ ಕಾರ್ಯದಿಂದ ಯಶ. ಮನೆಯಲ್ಲಿ ಸೌಹಾರ್ದ ಪರಿಸರ. ಸಣ್ಣಪುಟ್ಟ ತಿಕ್ಕಾಟಕ್ಕೆ ತಲೆ ಕೆಡಿಸಿಕೊಳ್ಳದಿರಿ.
ಮೀನ
ಕೆಲ ವಿಷಯದಲ್ಲಿ ಕ್ಷಿಪ್ರ ನಿರ್ಧಾರ ತಾಳಿ. ಇತರರಿಗೆ ನೋವಾದೀತೆಂಬ ಹಿಂಜರಿಕೆ ಬೇಡ. ವ್ಯವಹಾರದಲ್ಲಿ ತೊಡಕು.



