ಹೊಸದಿಗಂತ ವರದಿ ಹಾಸನ :
ಬೆಂಗಳೂರಿನಿಂದ ಕುದುರೆ ಮುಖಕ್ಕೆ ಕಾರು ಮತ್ತು ಮಿನಿ ಬಸ್‌ನಲ್ಲಿ ಟ್ರಿಪ್ ಹೊರಟಿದ್ದ ವಾಹನಕ್ಕೆ ಪುಂಡರು ಕಲ್ಲುತೂರಾಟ ನಡೆಸಿ ಹುಚ್ಚಾಟ ಮೆರೆದಿರುವ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75, ಕೆಂಚಟ್ಟಹಳ್ಳಿ ಬಳಿ ನಡೆದಿದೆ.
ಕಾರು ಮತ್ತು ಮಿನಿ ಬಸ್‌ನಲ್ಲಿ ಬೆಂಗಳೂರಿನಿಂದ ಕುದುರೆ ಮುಖಕ್ಕೆ ಕಾರು ಮತ್ತು ಮಿನಿ ಬಸ್‌ನಲ್ಲಿ ಟ್ರಿಪ್ ಹೊರಟಿದ್ದ ಕುಟುಂಬಗಳು ಡಾಬಾದಲ್ಲಿ ಊಟಕ್ಕೇ ಕುಳಿತಿದ್ದಾರೆ. ಈ ವೇಳೆ ಮಹಿಳೆಯರು ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಡಾಬಾದಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ನಾಲ್ವರು ಅಪರಿಚಿತ ಯುವಕರು ಜೋರಾಗಿ ಮಾತನಾಡಬೇಡಿ ಎಂದು ಹವಾಸ್ ಹಾಕಿದ್ದಾರೆ. ಈ ವೇಳೆ ಟ್ರಿಪ್ ಹೊರಟಿದ್ದ ಕುಟುಂಬಗಳು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದು ಡಾಬಾದಿಂದ ಹೊರಗೆ ಬಂದು ಯುವಕರು ಮಿನಿ ಬಸ್ ಮೇಲೆ ಕಲ್ಲೆಸೆದು ಹುಚ್ಚಾಟ ಮೆರೆದಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲೆಸೆದು ಮಿನಿಬಸ್ ಮುಂಭಾಗದ ಗಾಜು ಪುಡಿಪುಡಿ ಮಾಡಿ ಪುಂಡರು ಎಸ್ಕೇಪ್ ಆಗಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.