ಚುನಾವಣೆಯಲ್ಲಿ ಸ್ಪಷ್ಟ ಬಹುಮತ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಟ್ರಂಪ್ 277 ಎಲೆಕ್ಟೋರಲ್ ಮತಗಳನ್ನು ಪಡೆದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು 270 ಎಲೆಕ್ಟೋರಲ್‌ ಮತಗಳನ್ನು ಗಳಿಸಬೇಕಿದೆ.

ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ದೊಡ್ಡ ಅಂತರದಲ್ಲಿ ಸೋಲಿಸಿದ್ದಾರೆ. ಕಮಲಾ ಹ್ಯಾರಿಸ್‌ 224 ಎಲೆಕ್ಟೋರಲ್ ಮತಗಳನ್ನು ಗೆದ್ದಿದ್ದಾರೆ.

ಅರಂಭದಲ್ಲಿ ಡೊನಾಲ್ಟ್‌ ಟ್ರಂಪ್‌ 267 ಮತಗಳು ಎಂದು ತೋರಿಸುತ್ತಿದ್ದವು. ಬಳಿಕ ಏಳು ಕ್ಷೇತ್ರಗಳಲ್ಲಿ ಒಂದಾದ ವಿಸ್ಕಾನ್ಸಿನ್‌ನಲ್ಲಿ ಗೆಲುವಿನೊಂದಿಗೆ ಟ್ರಂಪ್‌ ಅಧ್ಯಕ್ಷ ಗಾದಿ ಏರಲು ಬೇಕಾದ 270 ಎಲೆಕ್ಟೋರಲ್‌ ಮತಗಳನ್ನು ಪಡೆದುಕೊಳ್ಳಲು ಯಶಸ್ವಿಯಾದರು. ಸ್ಕಾನ್ಸಿನ್ ಹೊರತುಪಡಿಸಿ, ಉತ್ತರ ಕೆರೊಲಿನಾ, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಲ್ಲೂ ಗೆಲುವು ಕಂಡಿದ್ದಾರೆ.

ಟ್ರಂಪ್ ಎರಡನೇ ಅವಧಿಗೆ ಆಯ್ಕೆಯಾಗುವುದು ಖಚಿತವಾದಾಗ, ಅವರು ರಾಷ್ಟ್ರವ್ಯಾಪಿ ಪಡೆದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯವನ್ನು ಸಂಭ್ರಮಿಸಿದ್ದಲ್ಲದೆ, ಪತ್ನಿ ಮೆಲಾನಿಯಾ ಮತ್ತು ಕಿರಿಯ ಮಗ ಬ್ಯಾರನ್ ಅವರೊಂದಿಗೆ ವೇದಿಕೆಯಲ್ಲಿ “ಹಿಂದೆಂದೂ ನೋಡಿರದ ರಾಜಕೀಯ ಗೆಲುವು” ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!