ಬಿಳಿ ಶೂ ಧರಿಸಿದರೆ ಲುಕ್ ಎಲಿಗೆಂಟ್ ಆಗಿರುತ್ತೆ, ಆದರೆ ಬಿಳಿ ಶೂ ಬಹಳ ಬೇಗ ಕಲೆ ಹಿಡಿದು ಹಾಳಾಗಿ ಹೋಗುತ್ತವೆ. ನೀವು ಎಷ್ಟೇ ಚೆನ್ನಾಗಿ ಜೋಪಾನ ಮಾಡಿದರೂ, ಕೊಳೆಯಿಲ್ಲದೆ ಇಟ್ಟುಕೊಳ್ಳೋದು ಅಷ್ಟು ಸುಲಭವಲ್ಲ. ಆದ್ರೆ ಚಿಂತೆ ಬೇಡ! ನಿಮಗಾಗಿ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಬಳಸಿ ಶೂ ಕ್ಲೀನ್ ಮಾಡೋ ಸುಲಭ ಟಿಪ್ಸ್ ಇಲ್ಲಿದೆ.
ಟೂತ್‌ಪೇಸ್ಟ್ ಬಳಸಿ ಶೂ ಕ್ಲೀನ್ ಮಾಡಿ
ಬಿಳಿ ಟೂತ್‌ಪೇಸ್ಟ್ ಅನ್ನು ಶೂನಲ್ಲಿನ ಕಲೆ ಮೇಲೆ ಹಾಕಿ, ಹಲ್ಲುಜ್ಜುವ ಬ್ರಷ್‌ನಿಂದ ಉಜ್ಜಿರಿ. ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದರಿಂದ ಶೂಗಳು ಹೊಸದಂತೆ ಕಾಣುತ್ತವೆ.
ಅಡಿಗೆ ಸೋಡಾ ಮತ್ತು ವಿನೆಗರ್ ಪೇಸ್ಟ್
1 ಟೀಚಮಚ ಬೇಕಿಂಗ್ ಸೋಡಾ ಹಾಗೂ 1 ಟೀಚಮಚ ಬಿಳಿ ವಿನೆಗರ್ ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಶೂನಲ್ಲಿನ ಕಲೆ ಹಾಕಿ 10 ನಿಮಿಷ ಬಿಡಿ. ನಂತರ ಮೃದುವಾದ ಬ್ರಷ್ ಅಥವಾ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಬೇಬಿ ವೈಪ್ಸ್ ಅಥವಾ ಸ್ಯಾನಿಟೈಜಿಂಗ್ ವೈಪ್ಸ್ ಬಳಕೆ
ಕಲೆ ತಕ್ಷಣ ಕ್ಲೀನ್ ಮಾಡಬೇಕಾದರೆ ಬೇಬಿ ವೈಪ್ಸ್ ಉಪಯೋಗಿಸಿ. ಇದರಿಂದ ತಕ್ಷಣವೇ ಧೂಳು, ಸೂಕ್ಷ್ಮ ಕಲೆಗಳು ಮತ್ತು ಕೊಳೆ ಹೋಗುತ್ತದೆ.
ನೇಲ್ ಪಾಲಿಷ್ ರಿಮೂವರ್ ಉಪಯೋಗಿಸಿ
ಪೆನ್ ಅಥವಾ ಇಂಕ್ ಕಲೆಗಳಿದ್ದರೆ, ಹತ್ತಿ ಉಂಡೆಗೆ ಸ್ವಲ್ಪ ನೇಲ್ ಪಾಲಿಶ್ ರಿಮೂವರ್ ಹಾಕಿ ಶೂಗೆ ಉಜ್ಜಿ. ನಂತರ ಒಣ ಬಟ್ಟೆ ಬಳಸಿ ಒರೆಸಿ.
ಮ್ಯಾಜಿಕ್ ಎರೇಸರ್ ಸ್ಪಾಂಜ್
ಸ್ಪಾಂಜ್ ಅನ್ನು ಸ್ವಲ್ಪ ನೀರಿನಲ್ಲಿ ಒದ್ದೆ ಮಾಡಿ ನಿಧಾನವಾಗಿ ಶೂಗಳ ಮೇಲೆ ಉಜ್ಜಿಕೊಳ್ಳಿ. ಇದು ಶೂಗಳ ಮೇಲಿನ ಕಲೆಗಳು ಮತ್ತು ಇನ್ನೀತರ ಗುರುತುಗಳನ್ನು ತೆಗೆದುಹಾಕುತ್ತದೆ. ಒಣ ಬಟ್ಟೆಯಿಂದ ಒರೆಸಿ.