ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರದ ಪಾತ್ರವಿಲ್ಲ: ಸಚಿವ ಎಂ.ಬಿ. ಪಾಟೀಲ್

ಹೊಸ ದಿಗಂತ ವರದಿ,ವಿಜಯಪುರ:

ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ನೇರವಾದ ಪಾತ್ರ ಇಲ್ಲ, ಓರ್ ಆಲ್ ಇಸ್ಟ್ರಕ್ಷನ್ ಅಂತ ಹೇಳ್ತಾರೆ. ಅದು ತನಿಖೆ ನಡೆದಿದೆ, ಅವರ ಪಾತ್ರ ಏನು ಅಂತ ಗೊತ್ತಾಗುತ್ತೆ ಎಂದರು.

ಓವರ್ ಆಲ್ ಅಂತ ಯಾರ ಬೇಕಾದರು ಹೇಳಬಹುದು. ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಾನು ನೋಡಿದ್ದೇನೆ. ನನಗೂ ಎರಡ್ಮೂರು ನಿಗಮಗಳು ಬರುತ್ತವೆ ಎಂದರು.

ಓರ್ ಆಲ್ ಇನ್ಸ್ಟ್ರಕ್ಷನ್ ಅಷ್ಟೇ ಅಲ್ಲ ಮಿನಿಸ್ಟರ್ ರಿಟನ್ ಇನ್ಸ್ಟ್ರಕ್ಷನ್ ಕೊಟ್ಟರೂ, ನಿಮಗದ ಅಧ್ಯಕ್ಷರು ರಿಟನ್ ಕೊಟ್ಟರು ಕಾನೂನು ಬಾಹಿರ ಅಂತ ತಳ್ಳಿಹಾಕುತ್ತಾರೆ. ಇದರಲ್ಲಿ ಮುಖ್ಯ ಪಾತ್ರ ಎಂಡಿಯದು ಬರುತ್ತೆ ಎಂದರು

ಕಾನೂನಾತ್ಮಕವಾಗಿದಿಯೋ ? ಇಲ್ವೋ ಅಂತ ಎಂಡಿ ನೋಡಬೇಕು. ಜೊತೆಗೆ ಬೋರ್ಡ್ ಇರುತ್ತೆ, ಬೋರ್ಡ್ ನಲ್ಲಿ ಚರ್ಚೆಗೆ ಬರದೇ ಹೇಗೆ ಮಾಡ್ತಾರೆ. ಮುಡಾದಲ್ಲಿ ಏನು ಆಗಿಲ್ಲ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಆಗಿರೋದು ಸತ್ಯ ಎಂದರು.

ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು, ಆಗಿಯೇ ಆಗುತ್ತೆ. ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದರ ಜೊತೆಗೆ ಬಿಜೆಪಿ ಅವಧಿಯಲ್ಲಿನ ಹಗರಣದ ತನಿಖೆ ಆಗಲಿದೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಿದರೆ ಇವೆಲ್ಲವೂ ತನಿಖೆಗೆ ಹಾಕಲಿ ಎಂದರು.

ಇವರು ಮೇಲೆ ಸಿಬಿಐ, ಇಡಿ ತನಿಖೆ ಮಾಡಲಿ. ಭೋವಿ ನಿಗಮದ ಹಗರಣ, ಕೋವಿಡ್ ಹಗರಣ ಆಗಿದ್ದಾಗ ಸಿಎಂ ಯಾರಿದ್ದರು ಅವರು ರಾಜೀನಾಮೆ ಕೊಟ್ರಾ ?, ಬಿಜೆಪಿ ಸಚಿವರು ರಾಜೀನಾಮೆ ಕೊಟ್ರಾ?, ತಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ ? ನಮ್ಮ ಸರ್ಕಾರ ತಪ್ಪಿತಸ್ಥ ರಕ್ಷಣೆ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ವಾಲ್ಮೀಕಿ ನಿಗಮದಲ್ಲಿ ಯಾರದೇ ತಪ್ಪಿತಸ್ಥರಿದ್ದರು ಶಿಕ್ಷೆ ಆಗುತ್ತೆ. ಮುಡಾದಲ್ಲಿ ಏನು ಹಗರಣ ಆಗಿಲ್ಲ ಎಂದರು.

ವಾಲ್ಮೀಕಿ ನಿಗಮದಲ್ಲಿನ ಹಗರಣದ ಬಗ್ಗೆ ಎಸ್ ಐ ಟಿ, ಇಡಿ, ಸಿಬಿಐ ತನಿಖೆ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿನ ಹಣ ರಿಕವರಿ ಆಗ್ತದೆ. ವರ್ಗಾವಣೆಯಾದ ಎಲ್ಲಾ ಹಣ ರಿಕವರಿ ಆಗೋದು ಖಚಿತ. ಯಾರು ತಪ್ಪು ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗುತ್ತೆ ಎಂದರು.

ಎಂಡಿಯವರು ಮಾಡಿದ್ದಾರೆ ಅದೊಂದು ಭಾಗ. ಯುನಿಯನ್ ಬ್ಯಾಂಕ್ ನವರಿಗೂ ತನಿಖೆಗೆ ಹಾಕಿದ್ದಾರೆ. ಬ್ಯಾಂಕ್ ಅಧಿಕಾರಿಗಳದ್ದು ತಪ್ಪಿದೆ. ಇದರಲ್ಲಿ ಬ್ಯಾಂಕ್ ನವರು ಶಾಮೀಲಾಗಿದ್ದಾರೆ. ಕೇಂದ್ರ, ಸರ್ಕಾರದ ವಿತ್ತ ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವೆಲ್ಲವೂ ತನಿಖೆಯಾದ ಮೇಲೆ ಗೊತ್ತಾಗುತ್ತೆ. ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಬಿಜೆಪಿ ಸರ್ಕಾರದಲ್ಲಿ 21ಹಗರಣ ಆಗಿದೆ ಅಂತ ಹೇಳಿದ್ದಾರೆ. ಸಿಎಂ ಅವರು ಇನ್ನೊಂದೆರಡು ಬಿಟ್ಟಿದ್ದಾರೆ. ಮಾಡಾಳ ವೀರುಪಾಕ್ಷಪ್ಪ ಹಗರಣ ಬಿಟ್ಟಿದ್ದಾರೆ. ಇವೆಲ್ಲವೂ ತನಿಖೆ ಆಗಬೇಕು. ಇಡಿ ಕೇವಲ ಒಂದು ಕೇಸ್ ಮೇಲೆ ತನಿಖೆ ಆಗಬಾರದು ಎಂದರು.

ಬಿಜೆಪಿ ಸರ್ಕಾರದಲ್ಲಿ ಹಗರಣದ ತನಿಖೆ ಸಿಬಿಐಯಿಂದ ಆಗಲಿ ಲಿಸ್ಟ್ ಕೊಡ್ತೀವಿ. ಕೊರೋನಾ ಸಂದರ್ಭದಲ್ಲಿ ದೊಡ್ಡ ಹಗರಣ ಆಗಿದೆ ಹೊರಗೆ ಬರಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!