ಬೆಂಗಳೂರಿನಲ್ಲಿ ಸರ್ಕಾರಿ ಒಡೆತನದ ದುಬೈ ಮಾದರಿ ಬಹುಮಹಡಿ ಪಾರ್ಕಿಂಗ್, ದೇಶದಲ್ಲಿ ಇದೇ ಮೊದಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿರುವ ವೆಹಿಕಲ್ ಪಾರ್ಕಿಂಗ್ ಈಗಾಗಲೇ ಉದ್ಘಾಟನೆಯಾಗಿದೆ.ಸರ್ಕಾರಿ ಒಡೆತನದ ದುಬೈ ಮಾದರಿ ಬಹುಮಹಡಿ ಪಾರ್ಕಿಂಗ್ ಇದಾಗಿದ್ದು, ಈ ರೀತಿ ಪಾರ್ಕಿಂಗ್‌  ದೇಶದಲ್ಲಿ ಇದೇ ಮೊದಲಾಗಿದೆ.

ತಂತ್ರಜ್ಞಾನ ಬಳಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ ದೇಶದಲ್ಲೇ ಮೊದಲ ಸರ್ಕಾರಿ ವಾಹನ ನಿಲುಗಡೆ ಕಟ್ಟಡ ಇದಾಗಿದ್ದು, ಅಡ್ವಾನ್ಸ್ ಪಾರ್ಕಿಂಗ್ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆ ಇದಕ್ಕಿದೆ. ಒಮ್ಮೆಲೇ 600 ಕಾರು ಹಾಗೂ 750 ಬೈಕ್‌ಗಳು ನಿಲುಗಡೆ ಸ್ಥಳಾವಕಾಶ ಇದ್ದು, ವಾಹನ ನಿಲುಗಡೆ ಕಟ್ಟಡದಲ್ಲಿ ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಾಹನ ನಿಲುಗಡೆ ಕಟ್ಟಡ ನಗದು ರಹಿತ ಹಾಗೂ ಮಾನವ ರಹಿತ ಅಡ್ವಾನ್ಸ್ ತಂತ್ರಜ್ಞಾನ ಹೊಂದಿದ್ದು, ವಾಹನ ನಿಲುಗಡೆ ಶುಲ್ಕವನ್ನು ಫಾಸ್ಟಾಗ್, ಯುಪಿಐ ಪೇಮೆಂಟ್ ಆ್ಯಪ್‌ಗಳ ಮೂಲಕ ಪಾವತಿಸಬಹುದಾಗಿದೆ. ವಾಹನ ನಿಲುಗಡೆಗೆ ಕಟ್ಟಡ ಪ್ರವೇಶಿಸುವಾಗಲೇ ಚಾಲಕ ಹಾಗೂ ವಾಹನದ ಛಾಯಾಚಿತ್ರ ತೆಗೆಯಲಾಗುತ್ತದೆ.

ಫ್ರೀಡಂ ಪಾರ್ಕ್ ಬಳಿ ವಿಶಾಲವಾಗಿದ ಜಾಗದಲ್ಲಿ ಹೈಟೆಕ್​​ ಸೌಲಭ್ಯದೊಂದಿಗೆ. ಪಕ್ಕಾ ಪ್ಲಾನ್​​​ ಮಾಡಿ ವಾಹನ ಪಾರ್ಕಿಂಗ್​ ಮಾಡಲು ಬಿಬಿಎಂಪಿ ನಿರ್ಮಾಣ ಮಾಡಿತ್ತು. BBMP ನಗರೋತ್ಥಾನ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ. ಎರಡು ವರ್ಷದ ಹಿಂದೆ ಕಾಮಗಾರಿ ಕಂಪ್ಲಿಟ್​ ಆಗಿದೆ. ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. SARAKARA BARU BARUTTA RAYARA KUDURE KATTE AYTANTE ENNUVA GADE MATIGE ANTIKONANGIDE KARANA -ABHUCRUDDI SHOONYA SARAKARA ADU E CONGRESS SARAKARA BANDA MELANTU MUKYA MANTRI GE KELASAVE ILLADANTAGIDE KARANA- IRO BARO ADAYAVANELLA PUGASATTE BHAGYAGALIGE HANCHIKONDU – NIRUDYOGIGALANTE KELASAVILLADANTAGIDE E SARAKARAKKE-

LEAVE A REPLY

Please enter your comment!
Please enter your name here

error: Content is protected !!