BUDGET | ಕ್ಯಾನ್ಸರ್​​ ಪೀಡಿತರಿಗಾಗಿ ಸರ್ಕಾರದಿಂದ Day care, ಇದರಿಂದ ರೋಗಿಗಳಿಗೆ ಲಾಭ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ನೇ ಸಾಲಿನ ಆಯವ್ಯಯ ಮಂಡಿಸಿದರು. ಸೀತಾರಾಮನ್ ಅವರು ಮಂಡಿಸಿದ ಹೆಲ್ತ್​ ಬಜೆಟ್​ನಲ್ಲಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡೇ ಕೇರ್’ ಆರಂಭಿಸೋದಾಗಿ ತಿಳಿಸಿದ್ದಾರೆ.

ಸರ್ಕಾರದಿಂದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡೇ-ಕೇರ್ ಸ್ಥಾಪಿಸಲಾಗುತ್ತದೆ. ಆ ಮೂಲಕ, ಚಿಕಿತ್ಸೆಯ ಜೊತೆಗೆ, ರೋಗಿಗೆ ಮತ್ತು ಅವನ ಕುಟುಂಬಕ್ಕೆ ಮಾನಸಿಕ ಬೆಂಬಲ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪ್ರತಿದಿನ ರೋಗಿಗಳು ಡೇ ಕೇರ್​ಗೆ ಬಂದು ಚಿಕಿತ್ಸೆ ಪಡೆದ ಸಂಜೆ ವೇಳೆಗೆ ಮನೆಗೆ ಹೋಗುವ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಸಮಯ ಹಾಗೂ ಹಣ ಉಳಿಸಲು ಸಹಾಯ ಆಗಲಿದೆ. ಯಾಕೆಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಮಿತಿ ಮೀರಿ ಬಿಲ್ ಪಾವತಿಸಬೇಕಾಗಿತ್ತು.

ಡೇ ಕೇರ್ ಸೆಂಟರ್‌ಗಳು ಕಿಮೊಥೆರಪಿ ಇನ್ಫ್ಯೂಷನ್ ಸೌಲಭ್ಯಗಳನ್ನು ಒದಗಿಸುತ್ತವೆ. ಇದನ್ನು ಖಾಸಗಿ ಕೋಣೆ ಅಥವಾ ಸಾಮಾನ್ಯ ಪ್ರದೇಶದಲ್ಲಿ ನೀಡಬಹುದು. ಡೇ ಕೇರ್ ಸೆಂಟರ್‌ಗಳು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕ್ಯಾನ್ಸರ್‌ನ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!