ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಆರ್‌ವಿ ದೇಶಪಾಂಡೆ ಹೇಳಿದರು.
ಕಾರವಾರದಲ್ಲಿ ಮಾತನಾಡಿದ ದೇಶಪಾಂಡೆ, ಸರ್ಕಾರ ಯಾವುದನ್ನೂ ಉಚಿತವಾಗಿ ನೀಡಬಾರದು. ಉಚಿತ ಎನ್ನುವುದೇ ಅಪಾಯಕಾರಿ ಎಂದು ತಮ್ಮದೇ ಸರ್ಕಾರದ ಉಚಿತ ಯೋಜನೆಯ ವಿರುದ್ಧ ಕಿಡಿಕಾರಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಎಲ್ಲರಿಗೂ ಉಚಿತವಾಗಿ ನೀಡುತ್ತಾ ಹೋದರೆ ಸಾರಿಗೆ ಸಂಸ್ಥೆ ನಡೆಸುವುದು ಕಷ್ಟವಾಗಬಹುದು ಎಂದು ಹೇಳಿದರು.