ದಿಗಂತ ವರದಿ ಮಂಡ್ಯ :
ಸಭೆಯಲ್ಲಿ ರೈತ ಮುಖಂಡರು ಹಾಗೂ ಸಂಘಟನೆಗಳ ಮುಖಂಡರ ಮಾತುಗಳನ್ನು ಆಲಿಸಿ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಗಣಿಗಾರಿಕೆಯಿಂದ ಬರುವ ರಾಜಧನದಿಂದೇನೂ ಸರ್ಕಾರ ನಡೆಸುವ ಪ್ರಮೇಯ ನಮಗೆ ಬಂದಿಲ್ಲ. ನಮಗೂ ಕೆ.ಆರ್.ಎಸ್. ಅಣೆಕಟ್ಟೆಯ ಸುರಕ್ಷತೆಯೇ ಬಹಳ ಮುಖ್ಯ ಎಂದರು.
ಟ್ರಯಲ್ ಬ್ಲಾಸ್ಟ್ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಜು.15ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು.
ಹೈಕೋರ್ಟ್ ಆದೇಶ ಬಂದ ನಂತರ ಟ್ರಯಲ್ ಬ್ಲಾಸ್ಟ್ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಣ. ಅಲ್ಲಿಯವರೆಗೂ ಟ್ರಯಲ್ ಬ್ಲಾಸ್ಟ್ ಮಾಡುವುದಿಲ್ಲ. ಯಾರೂ ಸಹ ಗೊಂದಲ ಮಾಡಿಕೊಳ್ಳಬೇಡಿ, ನಮಗೆ ಗಣಿಗಾರಿಕೆ ಮುಖ್ಯವಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿರುವ ಅಣೆಕಟ್ಟೆ ಸುರಕ್ಷತೆ ಮುಖ್ಯ. ಸಣ್ಣ ತೊಂದರೆ ಆಗಲೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು.