ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ರಾಜ್ಯದ ಆದಾಯಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಇಲಾಖೆಗಳಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ. ಅವುಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ನೊಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಹೆಚ್ಚಿನ ರಾಜಸ್ವ ಗುರಿಯನ್ನು ಹೊಂದಿದೆ.
ಮೂರು ಇಲಾಖೆಯ ಆದಾಯ ನಿರೀಕ್ಷೆ ಹೀಗಿದೆ:
- ವಾಣಿಜ್ಯ ತೆರಿಗೆ ಇಲಾಖೆ – 1,01,000 ಲಕ್ಷ ಕೋಟಿ
- ಅಬಕಾರಿ ರಾಜಸ್ವ – 36000 ಕೋಟಿ
- ನೋಂದಣಿ ಮತ್ತು ಮುದ್ರಾಂಕ – 25,000 ಕೋಟಿ
ಒಟ್ಟಾಗಿ 1,62,000 ಕೋಟಿ ರಾಜ್ಯದ ಆದಾಯ ಬರುವ ನಿರೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಹೊಂದಿದೆ.